ಸಾಂಸ್ಕೃತಿಕ ಹೆಮ್ಮೆ
ಭಾರತವು ಅನೇಕ ಸಂಸ್ಕೃತಿಗಳ ನಾಡು. ಪ್ರಪಂಚದ ಅತ್ಯಂತ ಪ್ರಾಚೀನ ನಾಗರೀಕತೆಗಳಲ್ಲಿ ಒಂದಾಗಿದೆ. ಇದರ ಪ್ರಾಚೀನತೆ 4000 ವರ್ಷಗಳ ಹಿಂದೆ ಸರಿಯುತ್ತದೆ. ಈ ಸಮಯದಲ್ಲಿ ಅನೇಕ ಪದ್ಧತಿಗಳು ಮತ್ತು ಸಂಪ್ರದಾಯಗಳು ಸಮ್ಮಿಳಿತವಾಗಿವೆ. ಇದು ದೇಶದ ಸಮೃದ್ಧ ಸಂಸ್ಕೃತಿ ಮತ್ತು ಪರಂಪರೆಗಳನ್ನು ಪ್ರತಿಬಿಂಬಿಸುತ್ತದೆ.
ಸಮೃದ್ಧ ಸಾಂಸ್ಕೃತಿಕ ಪರಂಪರೆಯಿಂದ ಅತ್ಯಂತ ರುಚಿಕರ ಖಾದ್ಯಗಳ ಮೂಲ ಸೃಷ್ಟಿಯವರೆಗೂ ಈ ದೇಶವು ಸೀಮಾತೀತವಾಗಿದೆ. ತಮ್ಮ ಸಾಂಸ್ಕೃತಿಕ ಹಿನ್ನೆಲೆಯ ಬಗ್ಗೆ ಈ ದೇಶದ ಜನರು ಹೆಮ್ಮೆ ಪಡುತ್ತಾರೆ ಹಾಗೂ ತಮ್ಮ ಪರಂಪರೆಗಳನ್ನು ಸತತವಾಗಿ ಮುಂದುವರೆಸುತ್ತಿದ್ದಾರೆ.
ಹಿಂದಿ ಭಾಷೆಯ ನಾಣ್ಣುಡಿಯಂತೆ, ʻʻಕೋಸ ದೂದಲ್ಲಿ ನೀರು ಬದಲಾಗುತ್ತದೆ, ನಾಲ್ಕು ಕೋಸ ದೂರದಲ್ಲಿ ಭಾಷೆ ಬದಲಾಗುತ್ತದೆ,ʼʼ ಭಾರತದ ಭಾಷಾ ವೈವಿಧ್ಯತೆಯು ತೆರೆದುಕೊಳ್ಳುತ್ತದೆ. ಬಹುಸಂಸ್ಕೃತಿಯ ನಾಡಾದ ಭಾರತದಲ್ಲಿ ಹಂಚಿಕೊಳ್ಳಬಹುದಾದ ಭಾಷೆಯು ಒಗ್ಗೂಡಿಸುವ ಭಾಷೆಯಾಗುತ್ತದೆ ಮತ್ತು ಅದು ನಮ್ಮ ಸಂಸ್ಕೃತಿಯ ಒಂದು ಭಾಗವಾಗುತ್ತದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಪ್ರವಾಸ ಮಾಡುವಾಗ ಭವ್ಯ ಪರಂಪರಾಗತ ಸ್ಮಾರಕಗಳನ್ನು ನಾವು ನೋಡಬಹುದು. ಜನರು ಹೆಮ್ಮೆಯಿಂದ ತಮ್ಮ ಸಂಸ್ಕೃತಿ, ಸಂಪ್ರದಾಯಬದ್ಧ ಖಾದ್ಯಗಳು, ಉಪಭಾಷೆ ಮತ್ತು ವಸ್ತ್ರಗಳನ್ನು ಅಪ್ಪಿಕೊಳ್ಳುತ್ತಿದ್ದಾರೆ.
- ಭಾರತೀಯ ಸಾಹಿತ್ಯದ ಮುಂದುವರಿಸುವಿಕೆ (ವಿಶೇಷವಾಗಿ ಸ್ಥಳೀಯ/ಪ್ರಾಂತೀಯ ಕೃತಿಗಳು): ಪ್ರಾಂತೀಯ ಪ್ರಕಟಣಾ ಸಂಸ್ಥೆಗಳನ್ನು ಗುರುತಿಸುವುದು, ಭಾರತೀಯ ಭಾಷೆಗಳ ಉಗಮದ ಅರಿವು ಮತ್ತು ಬೇರೆ ದೇಶಗಳ ಭಾಷೆಗಳ ಮೇಲೆ ಅವುಗಳ ಪ್ರಭಾವ, ಐತಿಹಾಸಿಕ ಗ್ರಂಥಾಲಯಗಳ ಬಗೆಗಿನ ಅರಿವು ಇತ್ಯಾದಿ.
- ಕಲಾ ಪ್ರಕಾರಗಳು, ಜನಪದ, ಸಂಗೀತ, ನೃತ್ಯ: ಊಹಿಸಲಸಾಧ್ಯವೆನ್ನುವಂತಹ ಮಾನವತೆಗೆ ಸೇರಿದ ಸಾಂಸ್ಕೃತಿಕ ಪರಂಪರೆಯ ಭಾಗವಾದ ಗೀತೆಗಳು, ನೃತ್ಯ, ನಾಟಕ, ಸಂಗೀತ, ಜನಪದ ಸಂಪ್ರದಾಯಗಳು, ವರ್ಣಚಿತ್ರಗಳು ಹಾಗೂ ಸಾಹಿತ್ಯ ಭಾರತದ ಭಾಗವಾಗಿವೆ.
- ರಾಷ್ಟ್ರೀಯ ಅಸ್ಮಿತೆ: ಭಾರತದ ಹೊರಗಿನ ಹಾಗೂ ಓಳಗಿನ ರಾಜಕೀಯ ಮತ್ತು ಧಾರ್ಮಿಕ ಶಕ್ತಿಗಳು ಬದಲಾದಂತೆಲ್ಲ ರಾಷ್ಟ್ರೀಯ ಇತಿಹಾಸಕಾಲದಲ್ಲಿ ಭಾರತೀಯ ಅಸ್ಮಿತೆಯೂ ಸಹ ಬದಲಾಗಿದೆ. ದೇಶವು ಪ್ರಗತಿ ಹೊಂದುತ್ತಿದೆ. ಭಾರತದ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಯುವಜನತೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
- ದೃಶ್ಯ ಮಾಧ್ಯಮದ ಮೂಲಕ ಪ್ರಾಂತೀಯ ಭಾಷೆಗಳನ್ನು ಸಂರಕ್ಷಿಸುವುದು ಹಾಗೂ ವರ್ಧಿಸುವುದು: ಚಲನಚಿತ್ರೋತ್ಸವಗಳನ್ನು ಬೆಂಬಲಿಸುವುದು-ಉದಾ: ಸಣ್ಣ ಸಣ್ಣ ಸ್ಥಳಗಳಲ್ಲಿ ಪ್ರಾಂತೀಯ ಅಥವಾ ಸ್ಥಳೀಯ ಭಾಷೆಗಳ ಚಿತ್ರ ಪ್ರದರ್ಶನವನ್ನು ಸಂಚಾರಿ/ತಾತ್ಕಾಲಿಕ ತಾಣಗಳಲ್ಲಿ ಏಪಡಿಸುವುದು, ಪಾಲುದಾರ ರಾಜ್ಯಗಳಲ್ಲಿ ʻಒಂದು ಭಾರತ, ಶ್ರೇಷ್ಠ ಭಾರತʼ ನುಡಿಯನ್ನು ಬಳಸಿ ಭಾಷೆಗಳ ಪ್ರಚಾರ ಕಾಯವನ್ನು ಸಂಘಟಿಸುವುದು.
- ಭಾಷೆಗಳನ್ನು ಕಲಿಯಲು ವಿವಿಧ ಮಾಗಗಳ ಪಸರಣ ಕಾರ್ಯ: ಮಾತನಾಡುವುದು, ಕೇಳುವುದು, ಬರೆಯುವುದು, ಆಪ್ ಆಧಾರಿತ ಕಲಿಕೆಯ ಬಗ್ಗೆ ಅರಿವು (ಉದಾ: ಭಾಷಾ ಸಂಗಮ್ ಆಪ್, ಶಿಕ್ಷಣ ಮಂತ್ರಾಲಯ), ತಂತ್ರಜ್ಞಾನ ಮತ್ತು ಭಾಷೆಗಳ ನಡುವಿನ ಸಂಬಂಧ, ವೇಗ ಕಲಿಕೆ ಚಟುವಟಿಕೆಗಳು, ಪ್ರಾಂತೀಯ ವೃತ್ತ ಪತ್ರಿಕೆಗಳ ಓದಿನಿಂದ ಭಾಷೆಗಳನ್ನು ಕಲಿಯುವುದು ಇತ್ಯಾದಿ.
- ಭೂಗೋಳ ಶಾಸ್ತ್ರ ಮತ್ತು ಆಕಾಶ: ವೈವಿಧ್ಯಮಯ ಭೂ ಮೇಮೈ ಮತ್ತು ಹವಾಗುಣಗಳು ಭಾರತದಲ್ಲಿವೆ. ಹಿಮಾವೃತ ಹಿಮಾಲಯ ಮತ್ತು ಥಾರ್ ಮರುಭೂಮಿಗಳಿಂದಾಗಿ ಉತ್ತರ ಭಾರತವು ರಕ್ಷಿಸಲ್ಪಟ್ಟಿದೆ. ದಕ್ಷಿಣದ ಭಾಗವು ಉಷ್ಣವಲಯದ ಕಾಡುಗಳು, ಮಳೆಕಾಡುಗಳು, ಸಮುದ್ರತೀರದ ಬಯಲುಗಳು, ದ್ವೀಪಗಳು ಮತ್ತು ಮರಳು ದಂಡೆಗಳಿಂದ ಕಂಗೋಳಿಸುತ್ತಿದೆ.
read more