ಕಾರ್ಯಕ್ರಮಗಳು | ಸ್ವಾತಂತ್ರ್ಯದ ಅಮೃತ ಮಹೋತ್ಸವ | ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರ.

ಕಾರ್ಯಕ್ರಮಗಳು

ಆಜಾದಿ ಕಾ ಅಮೃತ ಮಹೋತ್ಸವವು ಭಾರತದ ಸ್ವಾತಂತ್ರ್ಯ ಗಳಿಕೆಯ 71 ವರ್ಷಗಳ ಅಖಿಲ ಭಾರತ ಮಟ್ಟದ ಉತ್ಸವ ಆಚರಣೆಯಾಗಿದೆ. ದೇಶದ ಉದ್ದಗಲಕ್ಕೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಈ ಆಂದೋಲನದಲ್ಲಿ ಮಿಳಿತವಾಗಿದೆ. ಪ್ರತಿ ಕಾರ್ಯಕ್ರಮವನ್ನು ಆಜಾದಿ ಕಾ ಅಮೃತ ಮಹೋತ್ಸವವನ್ನು ಮನಸ್ಸಿನಲ್ಲಿಟ್ಟುಕೊಂಡು ಸಂಘಟಿಸಲಾಗುತ್ತಿದೆ. ಇದರಲ್ಲಿ ʻಜನ ಭಾಗೀದಾರಿʼ ಎಂದರೆ ಭಾರತದ ಪ್ರಜೆಗಳ ಗರಿಷ್ಠ ಭಾಗವಹಿಸುವಿಕೆಯ ನಿಶ್ಚಿತತೆಯಿದೆ. ಇದನ್ನು ಸಾಧಿಸುವಲ್ಲಿ ಇಡೀ ಸರಕಾರ ಅಂದರೆ ಎಲ್ಲಾ ಮಂತ್ರಾಲಯಗಳ, ರಾಜ್ಯಗಳ ನಡುವಿನ ತಡೆರಹಿತ ಸಹಕಾರ ಸಾಧಿಸುವ ಸದುದ್ದೇಶವಿದೆ.

ಆಜಾದಿ ಕಾ ಅಮೃತ ಮಹೋತ್ಸವದಡಿಯಲ್ಲಿ ಈ ಕೆಳಕಂಡ ಕಾರ್ಯಕ್ರಮಗಳು ಘಟಿಸಿವೆ. ಈ ಕಾರ್ಯಕ್ರಮಗಳನ್ನು ಈ ರೀತಿಯಾಗಿ ವರ್ಗೀಕರಿಸಲಾಗಿದೆ.

  • ಮಂತ್ರಾಲಯಗಳು ಮತ್ತು ಇಲಾಖೆಗಳು: ಭಾರತ ಸರಕಾರದ ಕೇಂದ್ರೀಯ ಮಂತ್ರಾಲಯಗಳಿಂದ ಸಂಘಟಿಸಲಾದ ಕಾರ್ಯಕ್ರಮಗಳು
  • ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರಕಾರಗಳ ಮಂತ್ರಾಲಯಗಳು, ವಿಭಾಗಗಳು ಮತ್ತು ಸಂಸ್ಥೆಗಳು.
  • ದೇಶಗಳು: ಅಂತರರಾಷ್ಟ್ರೀಯವಾಗಿ ಸಂಘಟಿಸಲಾದ ಕಾರ್ಯಕ್ರಮಗಳು
  • ಸಂಕೇತಾತ್ಮಕ ಕಾರ್ಯಕ್ರಮಗಳು: ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸಂಘಟಿಸಲಾಗುವ ಆಜಾದಿ ಕಾ ಅಮೃತ ಮಹೋತ್ಸವದ ಛಾಪು ಮೂಡಿಸುವ ಕಾರ್ಯಕ್ರಮಗಳು.
  • ವಿಷಯಾಧಾರಿತ ಕಾರ್ಯಕ್ರಮಗಳು: ಆಜಾದಿ ಕಾ ಅಮೃತ ಮಹೋತ್ಸವದಡಿಯಲ್ಲಿನ ಐದು ವಿಷಯಗಳಾದ-ಸ್ವಾತಂತ್ರ್ಯ ಹೋರಾಟ, ವಿಚಾರಗಳು@75, ಸಾಧನೆಗಳು@75, ನಿರ್ಣಯಗಳು@75 ಪ್ರಕಾರವಾಗಿ ಉಪಲಬ್ಧವಿರುವ ಕಾರ್ಯಕ್ರಮಗಳು.
Filter

ಒಟ್ಟು ದಾಖಲೆಗಳು : 171429

ವಿಷಯ ಪ್ರದರ್ಶನ  1  ಗೆ  12    171429

Top