Azadi Ka Amrit Mahotsav

104084160

ಸಂದರ್ಶಕರುಗಳು

516885

ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ

188994

ಪ್ರಕಟಿಸಲಾದ ಕಾರ್ಯಕ್ರಮಗಳು

ಸ್ವಾತಂತ್ರ್ಯದ ಅಮೃತ ಮಹೋತ್ಸವ

ಸ್ವಾತಂತ್ರ್ಯದ ಅಮೃತ ಮಹೋತ್ಸವವು ಭಾರತದ ಸ್ವಾತಂತ್ರ್ಯದ 75 ವರ್ಷಗಳ ಉತ್ಸವಾಚರಣೆ ಹಾಗೂ ಸ್ಮರಣಾರ್ಥವಾಗಿ ಮತ್ತು ಈ ದೇಶದ ಜನರ, ಸಂಸ್ಕೃತಿಯ ಮತ್ತು ಸಾಧನೆಗಳ ನೆನಪಿಗಾಗಿ ಭಾರತ ಸರಕಾರವು ಆರಂಭಿಸಿದ ಕಾರ್ಯಕ್ರಮವಾಗಿದೆ.

ಇನ್ನಷ್ಟು ಓದಿ

ಭಾರತ ದೇಶವನ್ನು ಇಲ್ಲಿಯವರೆಗಿನ ವಿಕಾಸದ ಪಥದಲ್ಲಿ ಮುನ್ನಡೆಸಲು ಕಾರಣಕರ್ತರಾದ ಭಾರತದ ಜನರಿಗೆ ಈ ಮಹೋತ್ಸವವು ಸಮರ್ಪಿತವಾಗಿರುವುದಲ್ಲದೆ ಆತ್ಮನಿರ್ಭರ ಭಾರತದ ಭಾವನೆಗೆ ಪುಷ್ಟಿಕೊಟ್ಟು ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಭಾರತ 2.0 ದರ್ಶನವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವಲ್ಲಿ ಅವರಲ್ಲಿರುವ ಶಕ್ತಿ ಮತ್ತು ಸಾಮರ್ಥ್ಯಗಳೂ ಅಡಕವಾಗಿವೆ.

ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವ ಸಂಬಂಧದಲ್ಲಿ 75 ವಾರಗಳ ಹಿಂದೆಯೇ ಅಂದರೆ 12ನೇ ಮಾರ್ಚ್‌ 2021ರಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಶುಭಾರಂಭವಾಯಿತು. 15ನೇ ಆಗಸ್ಟ್‌ 2022ರಂದು ಮುಕ್ತಾಯವಾಗುತ್ತದೆ. ಈ ಕೆಳಗಿನ ಐದು ವಿಷಯಗಳು ಅಮೃತ ಮಹೋತ್ಸವದ ಮುಖ್ಯ ವಸ್ತುಗಳಾಗಿರುತ್ತವೆ.

Azadi Ka Amrit Mahotsav: Celebrating 75 Years of India's Independence

15ನೇ ಆಗಸ್ಟ್‌ 2023ರ ಕಡೆಗೆ ನಾವು ಗಣನೆ ಮಾಡುವಾಗ ಆಜಾದಿ ಕಾ ಅಮೃತ್‌ ಮಹೋತ್ಸವವು ಈ ಜನತಾ ಆಂದೋಲನವು ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಪ್ರಮುಖ ಅಂಶಗಳ ಮೇಲೆ ಕೇಂದ್ರಿಕರಿಸಲು ಇನ್ನಷ್ಟು ಒತ್ತು ಕೊಡಬಯಸುತ್ತದೆ. ಇದಕ್ಕಾಗಿ ಮಾನ್ಯ ಪ್ರಧಾನ ಮಂತ್ರಿಯವರು ಘೋಷಿಸಿರುವ ʻಪಂಚಪ್ರಾಣʼದ ಹಾದಿಯಲ್ಲಿ ಹೊಸ ವಿಷಯಗಳನ್ನು ಗುರುತಿಸಲಾಗಿದೆ: ಮಹಿಳೆ ಮತ್ತು ಮಕ್ಕಳು, ಆದಿವಾಸಿ ಬಲಪಡಿಸುವಿಕೆ, ನೀರು, ಸಾಂಸ್ಕೃತಿಕ ಹೆಮ್ಮೆ, ಪರಿಸರಕ್ಕಾಗಿ ಜೀವನ ಶೈಲಿ, ಆರೋಗ್ಯ ಮತ್ತು ಸುಖೀಭಾವ, ಒಳಗೊಳ್ಳುವಿಕೆಯ ಅಭಿವೃದ್ಧಿ, ಆತ್ಮ ನಿರ್ಭರ ಭಾರತ ಮತ್ತು ಒಗ್ಗಟ್ಟು.

ನರೇಂದ್ರ ಮೋದಿ, ಭಾರತದ ಪ್ರಧಾನ ಮಂತ್ರಿ.

ಸ್ವಾತಂತ್ರ್ಯ ಚಳುವಳಿಯ ಚರಿತ್ರೆಯ ರೀತಿಯಲ್ಲಿಯೇ ಸ್ವಾತಂತ್ರ್ಯಾ ನಂತರದ 75 ವರ್ಷಗಳ ಯಾತ್ರೆಯು ಸಾಮಾನ್ಯ ಭಾರತೀಯರ ಶ್ರಮ, ಅನ್ವೇಷಣೆ ಮತ್ತು ಸಂಘಟನಾ ಚಾತುರ್ಯಗಳ ಪ್ರತಿಫಲನವಾಗಿದೆ. ನಮ್ಮ ನಾಡಿನಲ್ಲಿಯೇ ಆಗಲೀ ಅಥವಾ ವಿದೇಶದಲ್ಲಿಯೇ ಆಗಲಿ ನಮ್ಮ ಪರಿಶ್ರಮದ ಮೂಲಕ ನಾವು ಭಾರತೀಯರು ನಮ್ಮನ್ನು ನಿರೂಪಿಸಿಕೊಂಡಿದ್ದೇವೆ. ನಾವು ನಮ್ಮ ಸಂವಿಧಾನದ ಬಗ್ಗೆ ಹೆಮ್ಮೆ ಪಡುತ್ತೇವೆ. ನಾವು ನಮ್ಮ ಪ್ರಜಾತಂತ್ರೀಯ ಮೌಲ್ಯಗಳ ಬಗ್ಗೆ ಹೆಮ್ಮೆ ಪಡುತ್ತೇವೆ. ಪ್ರಜಾತಂತ್ರದ ಮಾತೆಯಾಗಿ ಪ್ರಜಾತಂತ್ರವನ್ನು ಬಲಗೊಳಿಸುತ್ತ ಭಾರತವು ಮುಂದೆ ಮುಂದೆ ಚಲಿಸುತ್ತಿದೆ. ಜ್ಞಾನ ಮತ್ತು ವಿಜ್ಞಾನಗಳಲ್ಲಿ ಸಮೃದ್ಧವಾಗಿರುವ ಭಾರತವು ಮಂಗಳನಿಂದ ಚಂದ್ರನವರೆಗೆ ತನ್ನ ಗುರುತನ್ನು ಮೂಡಿಸುತ್ತಿದೆ.

ನರೇಂದ್ರ ಮೋದಿ ಭಾರತದ ಪ್ರಧಾನ ಮಂತ್ರಿ.

ನರೇಂದ್ರ ಮೋದಿ, ಭಾರತದ ಪ್ರಧಾನ ಮಂತ್ರಿ.

ಆಜಾದಿ ಅಮೃತ ಮಹೋತ್ಸವವು ಸ್ವಾತಂತ್ರ್ಯ ಚೈತನ್ಯದ ಅಮೃತವಾಗಿದೆ; ಸ್ವಾತಂತ್ರ್ಯ ಹೋರಾಟದ ಸೇನಾನಿಗಳ ಸ್ಫೂರ್ತಿದಾಯಕ ದಿವ್ಯೌಷಧವಾಗಿದೆ; ನವನವೀನ ವಿಚಾರಗಳ ಮತ್ತು ಪ್ರತಿಜ್ಞೆಗಳ ದಿವ್ಯಚಿಲುಮೆಯಾಗಿದೆ ಮತ್ತು ಆತ್ಮನಿರ್ಭರತದ ದಿವ್ಯ ನೆಲೆಯಾಗಿದೆ. ಆದ್ದರಿಂದ, ಈ ಮಹೋತ್ಸವವು ರಾಷ್ಟ್ರದ ಪುನಶ್ಚೇತನದ ಉತ್ಸವವಾಗಿದೆ; ಉತ್ತಮ ಆಡಳಿತದ ಕನಸನ್ನು ನನಸಾಗಿಸುವ ಹಬ್ಬವಾಗಿದೆ ಮತ್ತು ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಯ ಉತ್ಸವವಾಗಿದೆ.

ನರೇಂದ್ರ ಮೋದಿ ಭಾರತದ ಪ್ರಧಾನ ಮಂತ್ರಿ.

ಮುಂದುವರಿಯುತ್ತಿರುವ ಗಮನಾರ್ಹ ಕಾರ್ಯಕ್ರಮಗಳು

Indian Art, Architecture, and Design Biennale 2023

Indian Art, Architecture, and Design Biennale 2023

Start Date December 8, 2023

End Date March 31, 2024

Organiser -Ministry of Culture

Ideas@75

Meri Maati Mera Desh

Meri Maati Mera Desh

Start Date August 9, 2023

End Date October 31, 2023

Organiser -Ministry of Youth Affairs and Sports and Ministry of Culture

Freedom Struggle

ಮುಂಬರುವ ಗಮನಾರ್ಹ ಕಾರ್ಯಕ್ರಮಗಳು

ಆಜಾದಿ ಕ ಅಮೃತ ಮಹೋತ್ಸವ

ಸ್ವಾತಂತ್ರ್ಯ ಹೋರಾಟ

ನಾವು ಆಜಾದಿ ಕಾ ಅಮೃತ್ ಮಹೋತ್ಸವದಡಿಯಲ್ಲಿ ಸಂಸ್ಮರಣೆ ಮಾಡಬೇಕಾದ್ದನ್ನು ಈ ವಿಷಯ ಎತ್ತಿ ತೋರಿಸುತ್ತದೆ. ನಮಗಾಗಿ ಸ್ವಾತಂತ್ರ್ಯವನ್ನು ನನಸಾಗಿಸುವಲ್ಲಿ ಅನೇಕ ತ್ಯಾಗಗಳನ್ನು ಮಾಡಿದ ಹಾಡಿಹೊಗಳದ ನಾಯಕರುಗಳ ಕತೆಗಳನ್ನು ಜೀವಂತವಾಗಿಸಲು ಇದು ಸಹಾಯ ಮಾಡುತ್ತದೆ. 15ನೇ ಆಗಸ್ಟ್ 1947ರ ತನಕದ ಚಾರಿತ್ರಿಕ ಯಾತ್ರೆಯಲ್ಲಿನ ಮೈಲಿಗಲ್ಲುಗಳು ಸ್ವಾತಂತ್ರ್ಯ ಚಳುವಳಿಗಳಿಗೆ ಮರುಭೇಟಿ ನೀಡುತ್ತದೆ.

ಈ ವಿಷಯದಡಿಯಲ್ಲಿನ ಕಾಯಕ್ರಮಗಳೆಂದರೆ ಬೀರ್ಸಾ ಮುಂಡ ಜಯಂತಿ (ಜನ್ಜಾತೀಯ ಗೌರವ ದಿವಸ), ನೇತಾಜಿಯವರಿಂದ ಗವರ್ನಮೆಂಟ್ ಆಫ್ ಫ್ರೀ ಇಂಡಿಯಾದ ಹಂಗಾಮಿ ಘೋಷಣೆ, ಶಹೀದ್ ದಿವಸ ಇತ್ಯಾದಿ.

ಮತ್ತಷ್ಟು ಓದು

ಐಡಿಯಾಸ್ @75

ನಮ್ಮನ್ನು ರೂಪಿಸಿದ ವಿಚಾರಗಳು ಮತ್ತು ಆದರ್ಶಗಳ ಮೂಲಕ ಸ್ಫೂರ್ತಿ ಪಡೆದ ಕಾಯಕ್ರಮಗಳು ಮತ್ತು ಘಟನೆಗಳ ಮೇಲೆ ಈ ವಿಷಯವು ಕೇಂದ್ರೀಕೃತವಾಗುತ್ತದೆ. ಇವು ಈ ಅಮೃತ ಕಾಲದಲ್ಲಿ (ಇಂಡಿಯಾ@75 ರಿಂದ ಇಂಡಿಯಾ@100 ವರೆಗಿನ 25 ವರ್ಷಗಳು) ನಮ್ಮನ್ನು ಮುನ್ನಡೆಸುವಲ್ಲಿ ಮಾರ್ಗದರ್ಶನ ನೀಡುವುವು. ನಮಗೆಲ್ಲ ತಿಳಿದಿರುವ ಹಾಗೆ ಜಗತ್ತು ಬದಲಾಗುತ್ತಿದೆ ಮತ್ತು ಒಂದು ಹೊಸ ಪ್ರಪಂಚವು ಅನಾವರಣಗೊಳ್ಳುತ್ತಿದೆ. ನಮ್ಮ ನಂಬಿಕೆಗಳ ಶಕ್ತಿಯು ನಮ್ಮ ಆಲೋಚನೆಗಳ ದೀರ್ಘಕಾಲೀನತೆಯನ್ನು ನಿರ್ಧರಿಸುತ್ತವೆ. ಈ ವಿಷಯದಲ್ಲಿನ ಕಾರ್ಯಕ್ರಮಗಳು ಮತ್ತು ಘಟನೆಗಳು ಪ್ರಪಂಚಕ್ಕೆ ಭಾರತವು ನೀಡಿದ ಅನನ್ಯ ಕೊಡುಗೆಯನ್ನು ಜೀವಂತಗೊಳಿಸುವಲ್ಲಿ ಜನಪ್ರಿಯ, ಸಹಭಾಗಿತ್ವದ ಕಾರ್ಯಕ್ರಮಗಳನ್ನು ಒಳಗೊಂಡಿವೆ. ಇವುಗಳಲ್ಲಿ ಕಾಶಿ ಉತ್ಸವವೂ ಸೇರಿದೆ. ಕಾಶಿಯ ನೆಲದಲ್ಲಿ ಬೆಳೆದ ಹಿಂದಿ ಉದ್ಧಾಮ ಸಾಹಿತಿಗಳಿಗೆ ಈ ಉತ್ಸವವು ಸಮರ್ಪಿತವಾಗಿದೆ. ಹಾಗೆಯೇ 2047ರ ಭಾರತದ ಬಗೆಗಿನ ದರ್ಶನದ ಬಗ್ಗೆ 75 ಲಕ್ಷ ಮಕ್ಕಳು ಪ್ರಧಾನ ಮಂತ್ರಿಗಳಿಗೆ ಪೋಸ್ಟ್ ಕಾರ್ಡಿನಲ್ಲಿ ಬರೆದು ತಿಳಿಸುತ್ತಿದ್ದಾರೆ ಮತ್ತು ಭಾರತದ ಸ್ವಾತಂತ್ರ್ಯ ಚಳುವಳಿಯ ಹಾಡಿ ಹೊಗಳದ ನಾಯಕರುಗಳ ಬಗ್ಗೆ ತಮ್ಮ ಅನಿಸಿಕೆಗಳನ್ನೂ ಸಹ ತಿಳಿಸುತ್ತಿದ್ದಾರೆ...

ಮತ್ತಷ್ಟು ಓದು

ರಿಸಾಲ್ವ್@75

ನಮ್ಮ ಮಾತೃಭೂಮಿಯ ಭವಿಷ್ಯವನ್ನು ರೂಪಿಸಲು ನಮ್ಮೆಲ್ಲರ ಸಾಮೂಹಿಕ ನಿರ್ಧಾರ ಮತ್ತು ನಿಲುವುಗಳ ಮೇಲೆ ಈ ವಿಷಯವು ಕೇಂದ್ರೀಕರಿಸುತ್ತದೆ. 2047ನೇ ಇಸವಿಗಾಗಿ ನಮ್ಮ ಯಾತ್ರೆಗಾಗಿ ನಾವೆಲ್ಲರೂ ಮೇಲೆದ್ದು ವ್ಯಕ್ತಿಗಳಾಗಿ, ಗುಂಪುಗಳಾಗಿ, ನಾಗರಿಕ ಸಮಾಜವಾಗಿ, ಆಡಳಿತದ ಸಂಸ್ಥೆಗಳಾಗಿ ನಮ್ಮ ನಮ್ಮ ಪಾತ್ರವನ್ನು ನಿರ್ವಹಿಸಬೇಕು. ನಮ್ಮ ಸಾಮೂಹಿಕ ನಿಶ್ಚಯ, ಉತ್ತಮ ಕಾರ್ಯಯೋಜನೆ ಹಾಗೂ ದೃಢ ಪ್ರಯತ್ನಗಳಿಂದ ಮಾತ್ರವೇ ನಮ್ಮ ವಿಚಾರಗಳು ಕಾರ್ಯರೂಪಕ್ಕೆ ಬರುತ್ತವೆ. ಈ ಆಯೋಜನೆಯಡಿಯಲ್ಲಿನ ಕಾರ್ಯಕ್ರಮಗಳು ಮತ್ತು ಸಂದರ್ಭಗಳಾದ ಸಂವಿಧಾನ ದಿವಸ, ಉತ್ತಮ ಆಡಳಿತ ಸಪ್ತಾಹ ಇತ್ಯಾದಿಗಳು ಸದುದ್ದೇಶದಿಂದ ಕೂಡಿದ ʻಭೂಮಿ ಮತ್ತು ಜನರʼ ಬಗೆಗಿನ ನಮ್ಮ ಬದ್ಧತೆಯು ಜೀವಂತವಾಗಲು ಸಹಾಯಕವಾಗುತ್ತವೆ.

ಮತ್ತಷ್ಟು ಓದು

ಪ್ರಕ್ರಿಯೆಗಳು@75

ಕೋವಿಡ್ ನಂತರದ ಪ್ರಪಂಚದಲ್ಲಿ ನಮ್ಮ ನೀತಿಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮತ್ತು ಬದ್ಧತೆಗಳನ್ನು ಸಾಕಾರಗೊಳಿಸುವಲ್ಲಿ ತೆಗೆದುಕೊಂಡಿರುವ ಹೆಜ್ಜೆಗಳು ಹೊಸದಾದ ಪ್ರಪಂಚದ ಶ್ರೇಯಾಂಕದಲ್ಲಿ ತನಗೆ ನ್ಯಾಯಯುಕ್ತವಾಗಿ ಲಭ್ಯವಾಗಬಲ್ಲ ಸ್ಥಾನಕ್ಕಾಗಿ ಸಹಾಯಕವಾಗುವ ಎಲ್ಲಾ ಪ್ರಯತ್ನಗಳ ಮೇಲೆ ಈ ವಿಷಯವು ಕೇಂದ್ರೀಕರಿಸುತ್ತದೆ. ಪ್ರಧಾನ ಮಂತ್ರಿ ಮೋದಿಯವರ ಉದ್ಘೋಷಣೆಯಾದ ಸಬ್ ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಸಬ್ಕಾ ಪ್ರಯಾಸ್ ಇದಕ್ಕೆ ಸಂಚಲನ ಮೂಡಿಸಿದೆ. ಇದರಲ್ಲಿ ಸರಕಾರಿ ನೀತಿಗಳು, ಯೋಜನೆಗಳು, ಪ್ರಕ್ರಿಯಾ ಯೋಜನೆಗಳು, ಉದ್ಯೋಗ ಪತಿಗಳ ವಾಗ್ಧಾನಗಳು ಅಡಕವಾಗಿವೆ. ಸರ್ಕಾರೇತರ ಸಂಘ ಸಂಸ್ಥೆಗಳು, ನಮ್ಮ ವಿಚಾರಗಳನ್ನು ಸಾಕಾರಗೊಳಿಸುವಲ್ಲಿ ನಮಗೆ ಸಹಾಯ ಮಾಡುವ ನಾಗರಿಕ ಸಮಾಜ ಮತ್ತು ಉತ್ತಮ ನಾಳೆಗಳನ್ನು ಸೃಷ್ಟಿಸುವಲ್ಲಿ ಸಾಮೂಹಿಕವಾಗಿ ನಮಗೆ ಸಹಾಯ ಮಾಡುತ್ತಿದ್ದಾರೆ. ಈ ವಿಷಯದಡಿಯಲ್ಲಿನ ಕಾರ್ಯಕ್ರಮಗಳಲ್ಲಿ ಗತಿ ಶಕ್ತಿ-ಬಹು ವಿಧದ ಸಂಪರ್ಕಸಾಧನದ ರಾಷ್ಟ್ರೀಯ ಮಾಸ್ಟರ್ ಪ್ಲಾನ್ಗಳು ಸೇರಿಕೊಂಡಿವೆ..

ಮತ್ತಷ್ಟು ಓದು

ಸಾಧನೆಗಳು@75

ನಮ್ಮ ಹಾದಿಯಲ್ಲಿ ಗತಿಸಿದ ಸಮಯ ಮತ್ತು ನಮ್ಮೆಲ್ಲ ಮೈಲಿಗಳನ್ನು ಗುರುತಿಸುವ ಕಾರ್ಯವನ್ನು ಈ ವಿಷಯವು ಕೇಂದ್ರೀಕರಿಸುತ್ತದೆ. 75 ವರ್ಷಗಳಷ್ಟು ಹಳೆಯದಾದ ಒಂದು ಸ್ವತಂತ್ರ ರಾಷ್ಟ್ರವಾಗಿ ತನ್ನ 5000 ವರ್ಷಕ್ಕೂ ಮಿಗಿಲಾದ ಪ್ರಾಚೀನ ಇತಿಹಾಸವುಳ್ಳ ನಮ್ಮ ದೇಶದ ಸಾಮೂಹಿಕ ಸಾಧನೆಗಳನ್ನು ಸಾರ್ವಜನಿಕಗೊಳಿಸುವತ್ತ ಬೆಳೆಯುವ ಉದ್ದೇಶವನ್ನು ಹೊಂದಿದೆ.

ಈ ವಿಷಯದಡಿಯಲ್ಲಿನ ಕಾರ್ಯಕ್ರಮಗಳಲ್ಲಿ ಸ್ವರ್ಣಿಮ್ ವಿಜಯ್ ವರ್ಷ್-1971ರ ವಿಜಯಕ್ಕಾಗಿ ಸಮರ್ಪಿತ ಮಹಾಪರಿನಿರ್ವಾಣ ದಿವಸದಂದು ಆರಂಭಿಸಲಾಗುವ ಶ್ರೇಷ್ಠ ಯೋಜನೆ ಇತ್ಯಾದಿಗಳು ಅಡಕವಾಗಿವೆ.

ಮತ್ತಷ್ಟು ಓದು

ವಿಡಿಯೋ ಗ್ಯಾಲರಿ

ಸಾಮಾಜಿಕ ಪ್ರಕಟಣೆಗಳು

Top