ಮನೆ ಮನೆಯಲ್ಲೂ ತ್ರಿವರ್ಣ ದ್ವಜ

ಮನೆ ಮನೆಯಲ್ಲೂ ತ್ರಿವರ್ಣ ದ್ವಜ

ಆಜಾದಿ ಕ ಅಮೃತ್‌ ಮಹೋತ್ಸವದಡಿಯಲ್ಲಿ ದೇಶವಾಸಿಗಳು ಭಾರತದ ಸ್ವಾತಂತ್ರ್ಯದ 76ನೇ ವರ್ಷಾಚರಣೆಯನ್ನು ಸಂಭ್ರಮಿಸಲು ತಿರಂಗವನ್ನು ಮನೆ ಮನೆಗೆ ತಂದು ಹಾರಿಸಲು ಪ್ರೇರೇಪಿಸುವ ಚಳುವಳಿಯಾಗಿದೆ. ಬಾವುಟದ ಜೊತೆಗಿನ ನಮ್ಮ ಸಂಬಂಧವು ಎಂದೆಂದಿಗೂ ವೈಯುಕ್ತಿಕತೆಗಿಂತಲೂ ಹೆಚ್ಚಾಗಿ ಔಪಚಾರಿಕ ಮತ್ತು ಸಾಂಘಿಕವಾಗಿದೆ. 76ನೇ ವರ್ಷಾಚರಣೆಯ ಸಂದರ್ಭದಲ್ಲಿ ಇಡೀ ದೇಶವೇ ಸಮಷ್ಟಿಯಾಗಿ ಧ್ವಜವನ್ನು ಮನೆಗೆ ತರುವುದು ಬಾವುಟದ ಜೊತೆಗಿನ ನಮ್ಮ ವ್ಯಕ್ತಿಗತ ಸಂಬಂಧವಷ್ಟೇ ಅಲ್ಲದೆ ರಾಷ್ಟ್ರ ನಿರ್ಮಾಣಕ್ಕಾಗಿನ ನಮ್ಮ ನಿಷ್ಠೆಯ ಪ್ರತೀಕವಾಗಿರುವುದರ ಸಾಂಕೇತಿಕ ಕ್ರಮವಾಗಿದೆ. ಆ ಆಂದೋಲನದ ಹಿಂದಿರುವ ಆಲೋಚನೆಯೇನೆಂದರೆ ದೇಶವಾಸಿಗಳ ಹೃದಯಗಳಲ್ಲಿ ರಾಷ್ಟ್ರ ಪ್ರೇಮದ ಉದ್ದೀಪನ ಹಾಗೂ ಭಾರತದ ರಾಷ್ಟ್ರ ಧ್ವಜದ ಬಗೆಗಿನ ಅರಿವನ್ನು ಹೆಚ್ಚಿಸುವುದಾಗಿದೆ.

In continuation to last year’s resounding celebrations, you are encouraged to hoist the flag in your homes for a second edition of Har Ghar Tiranga from 13th to 15th August 2023.

Click here to upload your selfie with the Tiranga https://harghartiranga.com

(C) ಭಾರತದ ರಾಷ್ಟ್ರಧ್ವಜದ ಬಗೆಗೆ ಮತ್ತೆ ಮತ್ತೆ ಕೇಳಲಾಗುವ ಪ್ರಶ್ನೆಗಳು

ಪ್ರ.1 ರಾಷ್ಟ್ರಧ್ವಜದ ಬಳಕೆ, ಪ್ರದರ್ಶನ ಹಾಗೂ ಹಾರಿಸುವಿಕೆಯ ಬಗೆಗೆ ಯಾವುದಾದರೂ ಸೂಚನೆಗಳನ್ನು ಪಾಲಿಸಲೇಬೇಕಾದ ಮಾರ್ಗಸೂಚಿಯಿದೆಯೇ?

ಹೌದು ಇವೆ-ʻಫ್ಲಾಗ್‌ ಕೋಡ್‌ ಆಫ್‌ ಇಂಡಿಯ 2022ʼ ಮತ್ತು ಪ್ರಿವೆನ್ಷನ್‌ ಆಫ್‌ ಇನ್‌ಸಲ್ಟ್ಸ್‌ ಟು ನ್ಯಾಷನಲ್‌ ಆನರ್‌ ಆಕ್ಟ್‌, 1971.

ಪ್ರ.2 ಫ್ಲಾಗ್‌ ಕೋಡ್‌ ಆಫ್‌ ಇಂಡಿಯ 2022 ಎಂದರೇನು?

ರಾಷ್ಟ್ರಧ್ವಜವನ್ನು ಪ್ರದರ್ಶಿಸುವುದಕ್ಕಾಗಿನ ಎಲ್ಲಾ ಕಾನೂನುಗಳು, ಆಚರಣೆಗಳು ಮತ್ತು ಸೂಚನೆಗಳನ್ನು ಫ್ಲಾಗ್‌ ಕೋಡ್‌ ಆಫ್‌ ಇಂಡಿಯಾ ಒಗ್ಗೂಡಿಸುತ್ತದೆ. ಖಾಸಗಿ, ಸರಕಾರಿ ಹಾಗೂ ಸಾರ್ವಜನಿಕ ಸಂಸ್ಥೆಗಳ ರಾಷ್ಟ್ರಧ್ವಜದ ಪ್ರದರ್ಶನವನ್ನು ನಿಯಂತ್ರಿಸುತ್ತದೆ. ಫ್ಲಾಗ್‌ ಕೋಡ್‌ ಆಫ್‌ ಇಂಡಿಯಾ 26ನೇ ಜನವರಿ 2002ರಂದು ಜಾರಿಗೆ ಬಂದಿತು.

ಪ್ರ.3 ರಾಷ್ಟ್ರಧ್ವಜವನ್ನು ತಯಾರಿಸಲು ಯಾವ ವಸ್ತುವನ್ನು ಬಳಸಬಹುದು?

ಫ್ಲಾಗ್‌ ಕೋಡ್‌ ಆಫ್‌ ಇಂಡಿಯಾ 2002ನ್ನು ದಿ. 30ನೇ ಡಿಸೆಂಬರ್‌ 2021ರ ಆದೇಶದ ಮೇರೆಗೆ ತಿದ್ದುಪಡಿ ಮಾಡಲಾಗಿದೆ. ಅದರ ಪ್ರಕಾರವಾಗಿ ಪಾಲಿಯೆಸ್ಟರ್‌ ಅಥವಾ ಯಂತ್ರದಿಂದ ತಯಾರಾದ ಧ್ವಜವನ್ನು ಅನುಮತಿಸಲಾಗಿದೆ. ಈಗ ರಾಷ್ಟ್ರಧ್ವಜವನ್ನು ಕೈನಲ್ಲಿ ನೇಯಲಾದ ಅಥವಾ ಯಂತ್ರದಲ್ಲಿ ತಯಾರಾದ ಹತ್ತಿ/ಪಾಲಿಯೆಸ್ಟರ್‌, ಉಣ್ಣೆ, ರೇಷ್ಮೆ ಅಥವಾ ಖಾದಿಯಿಂದ ತಯಾರಿಸಬಹುದು.

ಪ್ರ.4 ರಾಷ್ಟ್ರಧ್ವಜದ ಸರಿಯಾದ ಉದ್ದಗಲ ಹಾಗೂ ಅನುಪಾತ ಯಾವುದು?

ಫ್ಲಾಗ್‌ ಕೋಡ್‌ ಆಫ್‌ ಇಂಡಿಯಾದ ಪ್ಯಾರಾ 1.3 ಮತ್ತು 1.4ರ ಪ್ರಕಾರವಾಗಿ ರಾಷ್ಟ್ರೀಯ ಧ್ವಜವು ಆಯತಾಕಾರದಲ್ಲಿರಬೇಕು. ಧ್ವಜವು ಯಾವುದೇ ಗಾತ್ರದಲ್ಲಿದ್ದರೂ ಉದ್ದ ಹಾಗೂ ಅಗಲದ ಅನುಪಾತವು 3:2ರಷ್ಟಿರಬೇಕು.

ಪ್ರ.5 ನನ್ನ ಮನೆಯಲ್ಲಿ ರಾಷ್ಟ್ರೀಯ ಧ್ವಜವನ್ನು ಪ್ರದರ್ಶಿಸಬಹುದೇ?

ಫ್ಲಾಗ್‌ ಕೋಡ್‌ ಆಫ್‌ ಇಂಡಿಯಾದ ಪ್ಯಾರಾ 2.2ರ ಪ್ರಕಾರವಾಗಿ ರಾಷ್ಟ್ರಧ್ವಜದ ಘನತೆ ಹಾಗೂ ಗೌರವಕ್ಕನುಗುಣವಾಗಿ ಸಮಾಜದ ಯಾವುದೇ ವ್ಯಕ್ತಿ ಅಥವಾ ಖಾಸಗಿ ಸಂಸ್ಥೆ ಅಥವಾ ವಿದ್ಯಾ ಸಂಸ್ಥೆ ಎಲ್ಲಾ ದಿನಗಳಂದು ಅಥವಾ ಸಂದರ್ಭಗಳಲ್ಲಿಯೂ ರಾಷ್ಟ್ರಧ್ವಜವನ್ನು ಹಾರಿಸಬಹುದು/ ಪ್ರದರ್ಶಿಸಬಹುದು.

ಪ್ರ.6 ಮನೆಯಲ್ಲಿ/ಹೊರಾಂಗಣದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಯಾವ ಸಮಯ ಸರಿಯಾದದ್ದು?

ದಿನಾಂಕ 20ನೇ ಜುಲೈ 2022ರ ತಿದ್ದುಪಡಿ ಆದೇಶದ ಪ್ರಕಾರ ಫ್ಲಾಗ್‌ ಕೋಡ್‌ ಆಫ್‌ ಇಂಡಿಯಾ, 2002ರಲ್ಲಿನ ಭಾಗ-2ರ ಪ್ಯಾರಾ 2.2ರ ನಿಯಮ xiನ್ನು ಕೆಳಕಾಣಿಸಿದ ನಿಯಮದಿಂದ ಬದಲಾಯಿಸಲಾಗಿದೆ: ಸಾರ್ವಜನಿಕರ ಮನೆಯ ಮೇಲೆ ಅಥವಾ ಹೊರಾಂಗಣದಲ್ಲಿ ಧ್ವಜವನ್ನು ಪ್ರದರ್ಶಿಸಲ್ಪಟ್ಟಾಗ ಅದನ್ನು ಹಗಲು ಮತ್ತು ರಾತ್ರಿಯಲ್ಲಿಯೂ ಹಾರಿಸಬಹುದು.

ಪ್ರ.7 ನನ್ನ ಮನೆಯಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶಿಸುವಾಗ ನಾನು ಯಾವುದಕ್ಕೆ ಗಮನ ಕೊಡಬೇಕು?

ರಾಷ್ಟ್ರಧ್ವಜವು ಪ್ರದರ್ಶಿಸಲ್ಪಟ್ಟಿದ್ದಾಗ ಅದನ್ನು ಒಂದು ಎತ್ತರದ ಸ್ಥಳದಲ್ಲಿ ವಿಶಿಷ್ಟವಾಗಿ, ಗೌರವಯುತವಾಗಿ ಇಡಬೇಕು. ಹರಿದ, ಮಡಿಕೆಯಾದ ಧ್ವಜವನ್ನು ಪ್ರದರ್ಶಿಸಬಾರದು.

ಪ್ರ.8 ರಾಷ್ಟ್ರಧ್ವಜದ ತಪ್ಪಾದ ಪ್ರದರ್ಶನ ಮಾಡದ ಹಾಗೆ ಯಾವ ವಿಷಯವನ್ನು ನಾನು ಗಮನದಲ್ಲಿಡಬೇಕು?

  • ರಾಷ್ಟ್ರಧ್ವಜವನ್ನು ತಿರುವಿದ ಸ್ಥಿತಿಯಲ್ಲಿ ಪ್ರದರ್ಶಿಸಬಾರದು. ಅಂದರೆ ಕೇಸರಿವರ್ಣವು ಕೆಳಗಿರಬಾರದು.
  • ಯಾವುದೇ ವ್ಯಕ್ತಿಗೆ ಅಥವಾ ವಿಷಯಕ್ಕೆ ರಾಷ್ಟ್ರಧ್ವಜವನ್ನು ಬಗ್ಗಿಸಬಾರದು.
  • ಬೇರೆ ಯಾವುದೇ ಧ್ವಜ ಅಥವಾ ಬಂಟಿಂಗ್‌ನ್ನು ರಾಷ್ಟ್ರಧ್ವಜಕ್ಕಿಂತಲೂ ಮೇಲೆ ಅಥವಾ ಅಕ್ಕಪಕ್ಕದಲ್ಲಿಡಬಾರದು.
  • ರಾಷ್ಟ್ರಧ್ವಜವನ್ನು ಹಾರಿಸಿದ ಕಂಭದ ಮೇಲೆ ಅಥವಾ ಅದಕ್ಕಿಂತ ಎತ್ತರದಲ್ಲಿ ಯಾವುದೇ ಹೂ ಅಥವಾ ಹಾರ ಅಥವಾ ಗುರುತಿನ ಮುದ್ರೆಯನ್ನು ಇಡಬಾರದು.
  • ರಾಷ್ಟ್ರಧ್ವಜವನ್ನು ಅಲಂಕಾರಕ್ಕಾಗಿ ಬಂಟಿಂಗ್‌ ರೀತಿಗಳಲ್ಲಿ ಬಳಸಬಾರದು.
  • ರಾಷ್ಟ್ರಧ್ವಜವು ನೆಲವನ್ನು ಮುಟ್ಟುವ ಹಾಗೆ ಮತ್ತು ನೀರಿನಲ್ಲಿ ತಗಲುವ ಹಾಗೆ ಬಿಡಬಾರದು.
  • ರಾಷ್ಟ್ರಧ್ವಜಕ್ಕೆ ಹಾನಿಯುಂಟು ಮಾಡುವ ರೀತಿಯಲ್ಲಿ ಅಂಟಿಸಬಾರದು ಅಥವಾ ಹಾರಿಸಬಾರದು.
  • ಒಂದೇ ಧ್ವಜಕಂಭದ ಮೇಲೆ ಏಕಕಾಲಕ್ಕೆ ಬೇರೆ ಯಾವುದೇ ಧ್ವಜದ ಜೊತೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬಾರದು.
  • ಭಾಷಣಕಾರನ ಮೇಜು ಅಥವಾ ವೇದಿಕೆಗಾಗಿ ರಾಷ್ಟ್ರಧ್ವಜವನ್ನು ಬಳಸಬಾರದು.
  • ಯಾವುದೇ ವ್ಯಕ್ತಿಯ ಸೊಂಟದ ಕೆಳಗಿನ ವಸ್ತ್ರದ ಭಾಗವಾಗಿ ಅಥವಾ ಸಮವಸ್ತ್ರ ಅಥವಾ ವೇಷಭೂಷಣದ ಭಾಗವಾಗಿ ರಾಷ್ಟ್ರ ಧ್ವಜವನ್ನು ಬಳಸಬಾರದು. ಅದನ್ನು ಮೆತ್ತೆಗಳ ಮೇಲೆ, ಕರವಸ್ತ್ರಗಳ ಮೇಲೆ, ಕಿರು ಟವೆಲ್‌ಗಳ ಮೇಲೆ ಅಥವಾ ಒಳಉಡುಪುಗಳು ಹಾಗೂ ವಸ್ತ್ರಗಳ ಮೇಲೆ ಕಸೂತಿ ಮಾಡಬಾರದು ಅಥವಾ ಮುದ್ರಿಸಬಾರದು.

ಪ್ರ.9 ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನವಾಗುವುದನ್ನು ತಡೆಯಲು ಯಾವ ನಿಯಮಗಳಿವೆ?

ಹೌದು. ʻʻದಿ ಪ್ರಿವೆನ್ಷ್‌ನ್‌ ಆಫ್‌ ಇನ್‌ಸಲ್ಟ್ಸ್‌ ಟು ನ್ಯಾಷನಲ್‌ ಆನರ್‌ ಆಕ್ಟ್‌, 1971ʼʼರ ಭಾಗ-2ರ 4ನೇ ವಿವರಣೆಯ ಪ್ರಕಾರವಾಗಿ ಕೆಳಕಾಣಿಸಿದ ವಿಷಯಗಳನ್ನು ಗಮನಿಸಬೇಕು:

  • ಯಾವುದೇ ರೂಪದಲ್ಲಿ, ಖಾಸಗಿ ಅಂತ್ಯಕ್ರಿಯೆ ಸೇರಿದಂತೆ, ರಾಷ್ಟ್ರಧ್ವಜವನ್ನು ಮೇಲೊದಿಕೆಯಾಗಿ ಬಳಸಬಾರದು.
  • ರಾಷ್ಟ್ರಧ್ವಜವನ್ನು ವೇಷಭೂಷಣದ ಅಥವಾ ಸಮವಸ್ತ್ರದ ಅಥವಾ ಯಾವುದೇ ಸಮವಸ್ತ್ರದ ಭಾಗವಾಗಿ ಅಥವಾ ಯಾವುದೇ ವ್ಯಕ್ತಿಯ ಸೊಂಟದ ಕೆಳಗಿನ ವಸ್ತ್ರದ ಭಾಗವಾಗಿ, ಮೆತ್ತೆಗಳ ಮೇಲೆ, ಕರವಸ್ತ್ರಗಳ ಮೇಲೆ, ಕಿರು ಟವೆಲ್‌ಗಳ ಮೇಲೆ ಅಥವಾ ಒಳಉಡುಪುಗಳ ಮೇಲೆ ಅಥವಾ ವಸ್ತ್ರಗಳ ಮೇಲೆ ಕಸೂತಿ ಮಾಡಬಾರದು ಹಾಗೂ ಮುದ್ರಿಸಬಾರದು.
  • ರಾಷ್ಟ್ರಧ್ವಜದ ಮೇಲೆ ಯಾವುದೇ ಅಕ್ಷರವಿರಬಾರದು.
  • ರಾಷ್ಟ್ರಧ್ವಜವನ್ನು ವಸ್ತುಗಳ ವಿಲೇವಾರಿ, ಸ್ವೀಕೃತಿ ಅಥವಾ ಹೊದಿಕೆಗಾಗಿ ಬಳಸಬಾರದು.
  • ರಾಷ್ಟ್ರಧ್ವಜವನ್ನು ಯಾವುದೇ ವಾಹನದ ಮೇಲೆ, ಹಿಂದೆ ಅಥವಾ ಪಕ್ಕದ ಭಾಗವಾಗಿ ಬಳಸಬಾರದು.

ಪ್ರ.10 ಹೊರಾಂಗಣದಲ್ಲಿ ಅಥವಾ ಸಾರ್ವಜನಿಕ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಸರಿಯಾದ ರೀತಿ ಯಾವುದು?

  • ರಾಷ್ಟ್ರಧ್ವಜವನ್ನು ಸಮಾನಾಂತರವಾಗಿ ಪ್ರದರ್ಶಿಸಿದಾಗ ಮತ್ತು ಗೋಡೆಯ ಮೇಲೆ ಸಮಾನಾಂತರವಾಗಿ ಇಟ್ಟಾಗ ಕೇಸರಿ ಭಾಗವು ಮೇಲ್ಭಾಗದಲ್ಲಿರಬೇಕು. ಧ್ವಜವನ್ನು ಮೇಲಿನಿಂದ ಇಳಿಬಿಟ್ಟಾಗ ರಾಷ್ಟ್ರಧ್ವಜದ ಕೇಸರಿ ಭಾಗವು ಬಲಕ್ಕಿರಬೇಕು ಅಂದರೆ ಅದರ ಎದುರಿಗಿರುವ ವ್ಯಕ್ತಿಯ ಎಡಭಾಗಕ್ಕಿರಬೇಕು.
  • ರಾಷ್ಟ್ರಧ್ವಜವನ್ನು ಕಟ್ಟೆಯ ಮೇಲ್ಭಾಗದಿಂದ ಕೋಲಿನ ಮೂಲಕ ಸಮಾನಾಂತರವಾಗಿ ಅಥವಾ ಓರೆಯಾಗಿ ಪ್ರದರ್ಶಿಸಿದಲ್ಲಿ ಅಥವಾ ಬಾಲ್ಕನಿಯಿಂದ ಅಥವಾ ಕಟ್ಟಡದ ಮುಂಭಾಗದಿಂದ ಪ್ರದರ್ಶಿಸಿದಲ್ಲಿ ಕೇಸರಿ ಪಟ್ಟಿಯು ಕೋಲಿನ ತುದಿಗಿರಬೇಕು.

ಪ್ರ.11 ರಾಷ್ಟ್ರಧ್ವಜವನ್ನು ಅರ್ಧ ಎತ್ತರಕ್ಕೆ ಹಾರಿಸಬಹುದೇ?

ಭಾರತ ಸರಕಾರವು ಉದ್ಘೋಷಿಸಿದ ಸಂದರ್ಭದ ಹೊರತಾಗಿ ರಾಷ್ಟ್ರಧ್ವಜವನ್ನು ಅರ್ಧ ಎತ್ತರದ ಮಟ್ಟಕ್ಕೆ ಹಾರಿಸಬಾರದು. ಅರ್ಧ ಮಟ್ಟಕ್ಕೆ ಹಾರಿಸಬೇಕಾದಲ್ಲಿ ಧ್ವಜವನ್ನು ಮೊದಲು ತುತ್ತ ತುದಿಗೆ ಹಾರಿಸಿ ನಂತರ ಅರ್ಧಮಟ್ಟಕ್ಕೆ ಇಳಿಸಬೇಕು. ದಿನದ ಅಂತ್ಯದಲ್ಲಿ ಧ್ವಜವನ್ನು ಕೆಳಗಿಳಿಸಬೇಕಾದಲ್ಲಿ ಅದನ್ನು ಮತ್ತೆ ತುತ್ತತುದಿಗೆ ಏರಿಸಬೇಕು.

ಪ್ರ.12 ನನ್ನ ಕಾರಿನ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬಹುದೇ?

ಫ್ಲಾಗ್‌ ಕೋಡ್‌ ಆಫ್‌ ಇಂಡಿಯಾ 2002ರ ಪ್ಯಾರಾ 3.44ರ ಪ್ರಕಾರವಾಗಿ ರಾಷ್ಟ್ರಧ್ವಜವನ್ನು ಕಾರಿನ ಮೇಲೆ ಹಾರಿಸುವ ಸವಲತ್ತನ್ನು ಕೆಳಕಾಣಿಸಿದ ವ್ಯಕ್ತಿಗಳಿಗೆ ಮಾತ್ರ ಸೀಮಿತ ಗೊಳಿಸಲಾಗಿದೆ.

  • ರಾಷ್ಟ್ರಪತಿ
  • ಉಪರಾಷ್ಟ್ರಪತಿ
  • ರಾಜ್ಯಪಾಲರು ಮತ್ತು ಉಪರಾಜ್ಯಪಾಲರು
  • ಭಾರತ ರಾಯಭಾರ ಕಚೇರಿಯ ಮುಖ್ಯಸ್ಥರು
  • ಪ್ರಧಾನ ಮಂತ್ರಿಗಳು
  • ಕೇಂದ್ರದ ಸಂಪುಟದ ಮಂತ್ರಿಗಳು, ರಾಜ್ಯ ಸಚಿವರು ಮತ್ತು ಉಪಸಚಿವರು. ರಾಜ್ಯದ ಅಥವಾ ಕೇಂದ್ರಾಡಳಿತ
  • ಪ್ರದೇಶಗಳ ಮುಖ್ಯಮಂತ್ರಿಗಳು ಹಾಗೂ ಸಂಪುಟದ ಸಚಿವರು
  • ಲೋಕಸಭೆಯ ಸ್ಪೀಕರ್‌, ರಾಜ್ಯಸಭೆಯ ಉಪ ಸಭಾಪತಿ, ಲೋಕಸಭೆಯ ಉಪಸಭಾಪತಿ, ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳ ಸಭಾಪತಿಗಳು, ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನ ಪರಿಷತ್ತುಗಳ ಸಭಾಪತಿಗಳು, ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನ ಪರಿಷತ್‌ ಉಪಸಭಾಪತಿಗಳು, ರಾಜ್ಯಗಳ ಹಾಗೂ ಕೇಂದ್ರಾಡಳಿತ ವಿಧಾನಸಭೆಗಳ ಉಪಸಭಾಪತಿಗಳು
  • ಚೀಫ್‌ ಜಸ್ಟೀಸ್‌ ಆಫ್‌ ಇಂಡಿಯಾ
  • ಸುಪ್ರೀಂ ಕೋರ್ಟಿನ ಜಡ್ಜ್‌ಗಳು
  • ಹೈಕೋರ್ಟಿನ ಮುಖ್ಯ ನ್ಯಾಯಾಧೀಶರುಗಳು
  • ಹೈಕೋರ್ಟಿನ ಜಡ್ಜ್‌ಗಳು

ಪ್ರ.13 ಬೇರೆ ದೇಶಗಳ ಧ್ವಜಗಳ ಜೊತೆಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ನಾವು ಹೇಗೆ ಪ್ರದರ್ಶಿಸಬಹುದು?

  • ಫ್ಲಾಗ್‌ ಕೋಡ್‌ ಆಫ್‌ ಇಂಡಿಯಾದ ಪ್ಯಾರಾ 3.32ರ ಪ್ರಕಾರವಾಗಿ ಒಂದು ಸೀದಾಗೆರೆಯಲ್ಲಿ ಬೇರೆ ದೇಶಗಳ ಧ್ವಜಗಳನ್ನು ಹಾರಿಸಿದ್ದಲ್ಲಿ ನಮ್ಮ ರಾಷ್ಟ್ರಧ್ವಜವು ಬಲತುದಿಯಲ್ಲಿ ಇರಬೇಕು. ಬೇರೆ ದೇಶಗಳ ಧ್ವಜಗಳನ್ನು ಆ ದೇಶಗಳ ಹೆಸರುಗಳ ಇಂಗ್ಲಿಷ್‌ ಆವೃತ್ತಿಯ ಪ್ರಕಾರವಾಗಿ ಅಕ್ಷರ ಮಾಲೆಯ ಸರದಿಯ ಪ್ರಕಾರವಾಗಿರಬೇಕು. ಧ್ವಜಗಳನ್ನು ವೃತ್ತಾಕಾರವಾಗಿ ಹಾರಿಸಬೇಕಿದ್ದಲ್ಲಿ ನಮ್ಮ ರಾಷ್ಟ್ರಧ್ವಜವನ್ನು ಮೊದಲಿಗೆ ಹಾರಿಸಿ ನಂತರ ಬೇರೆ ದೇಶಗಳ ಧ್ವಜಗಳನ್ನು ಬಲದಿಂದ ಎಡಕ್ಕೆ (ಗಡಿಯಾರದ ಸುತ್ತಿನ ಹಾಗೆ) ಹಾರಿಸಬೇಕು.
  • ಗೋಡೆಯ ಮೇಲೆ ಅಡ್ಡಲಾದ ಕೋಲಿನ ವಿರುದ್ಧವಾಗಿ ಧ್ವಜವನ್ನು ಪ್ರದರ್ಶಿಸಬೇಕಾದಾಗ ರಾಷ್ಟ್ರಧ್ವಜವು ಬಲಭಾಗಕ್ಕಿರಬೇಕು ಮತ್ತು ಇದರ ಕೋಲು ಇನ್ನೊಂದು ಧ್ವಜದ ಕೋಲಿನ ಮುಂದೆ ಇರಬೇಕು.
  • ರಾಷ್ಟ್ರಧ್ವಜವನ್ನು ಬೇರೆ ದೇಶಗಳ ಧ್ವಜಗಳ ಜೊತೆಯಲ್ಲಿ ಹಾರಿಸಬೇಕಾಗಿ ಬಂದಾಗ ಧ್ವಜಸ್ತಂಭಗಳು ಒಂದೇ ಗಾತ್ರದಲ್ಲಿ ಇರಬೇಕು.

ಪ್ರ.14 ರಾಷ್ಟ್ರಧ್ವಜವನ್ನು ಹೇಗೆ ವಿಸರ್ಜಿಸಬೇಕು?

  • ಫ್ಲಾಗ್‌ ಕೋಡ್‌ ಆಫ್‌ ಇಂಡಿಯಾದ ಪ್ಯಾರಾ 2.2ರ ಪ್ರಕಾರವಾಗಿ ರಾಷ್ಟ್ರಧ್ವಜವನ್ನು ಖಾಸಗಿಯಾಗಿ ಅದರ ಘನತೆಗೆ ತಕ್ಕುದಾಗಿ ಇಡಿಯಾಗಿ ಸುಟ್ಟುಹಾಕಬಹುದು ಅಥವಾ ಬೇರಾವುದೇ ವಿಧಾನದಿಂದ ನಾಶಮಾಡಬಹುದು.
  • ಕಾಗದದಲ್ಲಿ ಮಾಡಿದ ರಾಷ್ಟ್ರಧ್ವಜವನ್ನು ಸಾರ್ವಜನಿಕರು ಬೀಸಿ ಪ್ರದರ್ಶಿಸಿದ ನಂತರದಲ್ಲಿ ನೆಲದ ಮೇಲೆ ಬಿಸಾಡಬಾರದು. ಖಾಸಗಿಯಾಗಿ ಇವುಗಳನ್ನು ರಾಷ್ಟ್ರಧ್ವಜದ ಘನತೆಗೆ ತಕ್ಕುದಾಗಿ ವಿಸರ್ಜಿಸಬೇಕು.

    ಮೂಲ :

    www.mha.gov.in/sites/default/files/flagcodeofindia_070214.pdf
    www.mha.gov.in/sites/default/files/Prevention_Insults_National_Honour_Act1971_1.pdf

ಫ್ಲಾಗ್‌ ಕೋಡ್‌ ಆಫ್‌ ಇಂಡಿಯಾ, 2002ರ ಮುಖ್ಯ ಅಂಶಗಳು

ಭಾರತದ ರಾಷ್ಟ್ರಧ್ವಜವು ಭಾರತದ ಪ್ರಜೆಗಳ ಆಸೆ, ಆಶೋತ್ತರಗಳನ್ನು ಪ್ರತಿನಿಧಿಸುತ್ತದೆ. ಇದು ನಮ್ಮ ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ. ಈ ರಾಷ್ಟ್ರಧ್ವಜಕ್ಕೆ ಸಾರ್ವತ್ರಿಕವಾದ ಪ್ರೀತಿ, ಗೌರವ ಮತ್ತು ನಿಷ್ಠೆ ಇದೆ. ಇದು ಭಾರತೀಯರ ಭಾವನೆ ಮತ್ತು ಪ್ರಜ್ಞೆಯಲ್ಲಿ ವಿಶಿಷ್ಟವಾದ, ವಿಶೇಷವಾದ, ಅನನ್ಯವಾದ ಸ್ಥಾನವನ್ನು ಪಡೆದಿದೆ.

ಭಾರತದ ರಾಷ್ಟ್ರಧ್ವಜವನ್ನು ಹಾರಿಸುವ/ಬಳಸುವ/ಪ್ರದರ್ಶಿಸುವ ಸಂಬಂಧದಲ್ಲಿ ಪ್ರಿವೆನ್ಷ್‌ನ್‌ ಆಫ್‌ ಇನ್‌ಸಲ್ಟ್ಸ್ ಟು ನ್ಯಾಷನಲ್‌ ಆನರ್‌ ಆಕ್ಟ್‌, 1971 ಮತ್ತು ಫ್ಲಾಗ್‌ ಕೋಡ್‌ ಆಫ್‌ ಇಂಡಿಯಾ, 2002 ಕಾನೂನುಗಳ ನಿಯಂತ್ರಣವಿದೆ. ಫ್ಲಾಗ್‌ ಕೋಡ್‌ ಆಫ್‌ ಇಂಡಿಯಾ, 2002ರ ಕೆಲವು ಮುಖ್ಯ ಅಂಶಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಇಲ್ಲಿ ಪಟ್ಟಿ ಮಾಡಲಾಗಿದೆ:-

  • ದಿನಾಂಕ 30ನೇ ಡಿಸೆಂಬರ್‌ 2021ರ ತಿದ್ದುಪಡಿ ಆದೇಶದ ಪ್ರಕಾರವಾಗಿ ಫ್ಲಾಗ್‌ ಕೋಡ್‌ ಆಫ್‌ ಇಂಡಿಯಾ 2002ನ್ನು ತಿದ್ದುಪಡಿ ಮಾಡಲಾಗಿ ಈಗ ಪಾಲಿಯೆಸ್ಟರ್‌ನಿಂದ ಅಥವಾ ಮಗ್ಗಯಂತ್ರದಿಂದ ಮಾಡಲಾದ ರಾಷ್ಟ್ರಧ್ವಜಗಳನ್ನು ಅನುಮತಿಸಲಾಗಿದೆ.
  • ಹತ್ತಿ/ಪಾಲಿಯೆಸ್ಟರ್/ಉಣ್ಣೆ/ರೇಷ್ಮೆ/ಖಾದಿ ಬಟ್ಟೆಯಿಂದ ಕೈನೂತ/ಕೈಮಗ್ಗ/ಯಂತ್ರ ಮಗ್ಗದಿಂದ ರಾಷ್ಟ್ರಧ್ವಜಗಳನ್ನು ಈಗ ತಯಾರು ಮಾಡಬಹುದಾಗಿದೆ. ರಾಷ್ಟ್ರಧ್ವಜದ ಘನತೆ ಹಾಗೂ ಗೌರವಕ್ಕನುಗುಣವಾಗಿ ಸಮಾಜದ ಯಾವುದೇ ವ್ಯಕ್ತಿ ಅಥವಾ ಖಾಸಗಿ ಸಂಸ್ಥೆ ಅಥವಾ ವಿದ್ಯಾಸಂಸ್ಥೆಯು ಎಲ್ಲಾ ದಿನಗಳಂದು ಅಥವಾ ಸಂದರ್ಭಗಳಲ್ಲಿಯೂ ರಾಷ್ಟ್ರಧ್ವಜವನ್ನು ಹಾರಿಸಬಹುದು/ಪ್ರದರ್ಶಿಸಬಹುದು.
  • ದಿನಾಂಕ 19ನೇ ಜುಲೈ 2022ರ ತಿದ್ದುಪಡಿ ಆದೇಶದ ಪ್ರಕಾರ ಫ್ಲಾಗ್‌ ಕೋಡ್‌ ಆಫ್‌ ಇಂಡಿಯಾ, 2022ರಲ್ಲಿನ ಭಾಗ-2ರ ಪ್ಯಾರಾ 2.2ರ ನಿಯಮ xiರಲ್ಲಿನ ಕೆಳ ಕಾಣಿಸಿದಂತೆ ಬದಲಾಯಿಸಲಾಗಿದೆ.:
    ʻʻಸಾರ್ವಜನಿಕರ ಮನೆಯ ಮೇಲೆ ಅಥವಾ ಹೊರಾಂಗಣದಲ್ಲಿ ಧ್ವಜವನ್ನು ಪ್ರದರ್ಶಿಸಲ್ಪಟ್ಟಾಗ ಅದನ್ನು ಹಗಲು ಮತ್ತು ರಾತ್ರಿಯಲ್ಲಿಯೂ ಹಾರಿಸಬಹುದು.ʼʼ
  • ರಾಷ್ಟ್ರೀಯ ಧ್ವಜವು ಆಯತಾಕಾರದಲ್ಲಿರಬೇಕು. ಧ್ವಜವು ಯಾವುದೇ ಗಾತ್ರದಲ್ಲಿದ್ದರೂ ಉದ್ದ ಮತ್ತು ಅಗಲದ ಅನುಪಾತವು 3:2ರಷ್ಟಿರಬೇಕು.
  • ರಾಷ್ಟ್ರಧ್ವಜವು ಪ್ರದರ್ಶಿಸಲ್ಪಟ್ಟಾಗ ಅದನ್ನು ಒಂದು ಎತ್ತರದ ಸ್ಥಳದಲ್ಲಿ ವಿಶಿಷ್ಟವಾಗಿ, ಗೌರವಯುತವಾಗಿ ಇಡಬೇಕು. ಹರಿದ ಮಡಿಕೆಯಾದ ಧ್ವಜವನ್ನು ಪ್ರದರ್ಶಿಸಬಾರದು.
  • ಒಂದೇ ಧ್ವಜಸ್ತಂಭದ ಮೇಲೆ ಏಕಕಾಲದಲ್ಲಿ ಬೇರೆ ಧ್ವಜಗಳ ಜೊತೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬಾರದು.
  • ಒಂದೇ ಧ್ವಜಸ್ತಂಭದ ಮೇಲೆ ಏಕಕಾಲದಲ್ಲಿ ಬೇರೆ ಧ್ವಜಗಳ ಜೊತೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬಾರದು.
  • ಫ್ಲಾಗ್‌ ಕೋಡ್‌ನ ಭಾಗ-3, ಖಂಡ ixರಲ್ಲಿ ಸೂಚಿಸಿರುವಂತೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು ಮತ್ತಿತರನ್ನು ಹೊರತುಪಡಿಸಿ ಬೇರೆ ಯಾರೂ ಸಹ ತಮ್ಮ ವಾಹನದ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬಾರದು.
  • ಫ್ಲಾಗ್‌ ಕೋಡ್‌ನ ಭಾಗ-3, ಖಂಡ ixರಲ್ಲಿ ಸೂಚಿಸಿರುವಂತೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು ಮತ್ತಿತರನ್ನು ಹೊರತುಪಡಿಸಿ ಬೇರೆ ಯಾರೂ ಸಹ ತಮ್ಮ ವಾಹನದ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬಾರದು. ರಾಷ್ಟ್ರದ ಧ್ವಜಕ್ಕಿಂತಲೂ ಮೇಲೆ ಅಥವಾ ಅಕ್ಕಪಕ್ಕದಲ್ಲಿಯೂ ಬೇರೆ ಯಾವುದೇ ಧ್ವಜ ಅಥವಾ ಬಂಟಿಂಗ್ ನ್ನು‌ ಇಡಬಾರದು.

ಟಿಪ್ಪಣಿ:- ಹೆಚ್ಚಿನ ಮಾಹಿತಿಯು ಪ್ರಿವೆನ್ಷ್‌ನ್ ಆಫ್‌ ಇನ್‌ಸಲ್ಟ್ಸ್‌ ಟು ನ್ಯಾಷನಲ್‌ ಆನರ್‌ ಆಕ್ಟ್‌, 1971 ಮತ್ತು ಫ್ಲಾಗ್‌ ಕೋಡ್‌ ಆಫ್‌ ಇಂಡಿಯಾ 2002ರಲ್ಲಿ ಗೃಹಖಾತೆಯ ವೆಬ್‌ಸೈಟ್‌ನಲ್ಲಿ ಉಪಲಬ್ಧವಿವೆ. www.mha.gov.in

Glimpses from 2023

Andaman and Nicobar Islands

Andhra Pradesh

Arunachal Pradesh

Assam

Bihar

Chandigarh

Chhatisgarh

Dadra and Nagar Haveli and Daman & Diu

Delhi

Gujarat

Haryana

Himachal Pradesh

Jammu and Kashmir

Karnataka

Ladakh

Lakshadweep

Madhya Pradesh

Maharashtra

Mizoram

Nagaland

Odisha

Har Ghar Tiranga
Har Ghar Tiranga
Har Ghar Tiranga
Har Ghar Tiranga

Punjab

Har Ghar Tiranga
Har Ghar Tiranga
Har Ghar Tiranga
Har Ghar Tiranga
Har Ghar Tiranga
Har Ghar Tiranga

Rajasthan

Sikkim

Tamil Nadu

Tripura

Uttar Pradesh

West Bengal

Monuments lit up in the colours of the Tiranga

Glimpses of Last Year’s Celebrations of Har Ghar Tiranga

In its first edition, ‘Har Ghar Tiranga’ campaign became a people’s movement wherein everyone came together in unity and displayed the National Flag. From villages to cities, people from all across the country hoisted the Tiranga and expressed their gratitude towards the freedom fighters who fought bravely for our country. The campaign especially impacted the youth and children and encouraged them to preserve the memories of India’s freedom struggle. It also created a global splash! This campaign truly amplified the spirit of India’s unity in diversity.

Here are glimpses of the ‘Har Ghar Tiranga’ campaign held during 13th-15th August 2022.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಆಂಧ್ರ ಪ್ರದೇಶ

ಅರುಣಾಚಲ ಪ್ರದೇಶ

ಅಸ್ಸಾಮ್

ಬಿಹಾರ್

ಚಂಡೀಘರ್

ಚತ್ತೀಸ್ಘಡ್

ದಾದ್ರಾ ಮತ್ತು ನಗರ ಹವೇಲಿ ಮತ್ತು ದಾಮನ್ ಮತ್ತು ದಿಯು

ದೆಹಲಿ

ಗೋವಾ

ಗುಜರಾತ್

ಹರಿಯಾಣ

ಹಿಮಾಚಲ ಪ್ರದೇಶ

ಜಮ್ಮು ಮತ್ತು ಕಾಶ್ಮೀರ

ಜಾರ್ಖಂಡ್

ಕರ್ನಾಟಕ

ಕೇರಳ

ಲಡಾಕ್

ಲಕ್ಷದ್ವೀಪ

ಮಧ್ಯ ಪ್ರದೇಶ

ಮಹಾರಾಷ್ಟ್ರ

ಮಣಿಪುರ

ಮೇಘಾಲಯ

ಮಿಜೋರಾಮ್

ನಾಗಾಲ್ಯಾಂಡ್

ಒಡಿಸಾ

ಪಾಂಡಿಚೇರಿ

ಪಂಜಾಬ್

ರಾಜಸ್ತಾನ್

ಸಿಕ್ಕಿಮ್

ತಮಿಳು ನಾಡು

ತೆಲಂಗಾಣ

ತ್ರಿಪುರ

ಉತ್ತರಾಖಂಡ್

ಉತ್ತರ ಪ್ರದೇಶ

ಪಶ್ಚಿಮ ಬಂಗಾಳ

ತಿರಂಗದ ವರ್ಣಗಳಿಂದ ಬೆಳಗಿದ ಸ್ಮಾರಕಗಳು

Qutub Minar
Delhi
Ancient Site-Dholavira
Gujarat
Bandra Kurla Complex Connector
Maharashtra
Brihanmumbai Municipal Corporation
Maharashtra
Buddhist Site-Salihundam
Andhra Pradesh
Charminar
Hyderabad
Jantar Mantar
Delhi
Chhatrapati Shivaji Terminus
Maharashtra
Kondareddy Buruji
Andhra Pradesh
Lower Fort
Andhra Pradesh
Metcalf Hall
West Bengal
Pimpri Chinthwad Mahanagar Palika Bhawan
Maharashtra
Purana Qila
Delhi
Safdarjung Tomb
Delhi
Sanchi Stupa
Madhya Pradesh
Sardar Sarovar Dam
Gujarat
Sardar Sarovar Dam
Gujarat
Sarnath Monument
Uttar Pradesh
Sarnath Monument
Uttar Pradesh
Sarnath Monument
Uttar Pradesh
Sarnath Monument
Uttar Pradesh
Sher Shah Suri Tomb
Bihar
Sri Veerabhadra Swamy Temple
Andhra Pradesh
Sun Temple Konark
Odisha
Thousand Pillar Temple
Telangana

ಹರ್ ಘರ್ ತಿರಂಗ ಅಂತರರಾಷ್ಟ್ರೀಯ ಉತ್ಸವ ಆಚರಣೆಗಳು

Canada
Canada
Canada
Canada
Czech Republic
Czech Republic
Damascus, Syria
Democratic Republic of Congo
Equatorial Guinea
Frankfurt, Germany
Guatemala
Houston, USA
Houston, USA
Houston, USA
Jordan
Jordan
Jordan
Lebanon
Netherlands
New York, USA
São Paulo, Brazil
São Paulo, Brazil
São Paulo, Brazil
São Tomé and Príncipe
Seychelles
Sydney, Australia
Turkey
Turkey
Tanzania
United Kingdom
United Kingdom
United Kingdom
United Kingdom
United Kingdom
United Kingdom
Venezuela
Venezuela
Venezuela

Top