ಒಗ್ಗಟ್ಟು | ಶೀರ್ಷಿಕೆಗಳು 2.0 | ಆಜಾದಿ ಕ ಅಮೃತ್ ಮಹೋತ್ಸವ, ಭಾರತ ಸರ್ಕಾರ.

ಒಗ್ಗಟ್ಟು

Unity

ಒಗ್ಗಟ್ಟು

ವೈವಿಧ್ಯಮಯ ನಾಡು ನಮ್ಮ ಈ ಭಾರತ. ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಅನೇಕ ಸಂಸ್ಕೃತಿಗಳು, ಆಚರಣೆಗಳು, ಭಾಷೆಗಳು, ಆಹಾರಗಳು, ವಸ್ತ್ರಗಳು, ಹಬ್ಬಗಳು ಮತ್ತಿತರ ವೈಶಿಷ್ಠಗಳನ್ನು ಪ್ರದರ್ಶಿಸುತ್ತದೆ ಭಾರತ. ಒಂದು ಸಮೈಕಿಕ ಶಕ್ತಿಯಾಗಿ ಮುನ್ನಡೆಯಬೇಕು ಎನ್ನುವ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದರ್ಶನವು ಆತ್ಮನಿರ್ಭರ ಭಾರತದ ಅಡಿಗಲ್ಲಾಗಿದೆ. ಅದರಿಂದಾಗಿಯೇ 2022ರ 76ನೇ ಸ್ವಾತಂತ್ರ್ಯ ದಿನದಂದು ಮಾನ್ಯ ಪ್ರಧಾನ ಮಂತ್ರಿಯವರು ಘೋಷಿಸಿದ ಪಂಚಪ್ರಾಣಗಳಲ್ಲಿ ʻಒಗ್ಗಟ್ಟುʼ ಒಂದಾಗಿದೆ. ಈ ಸಮಾನ ಗುರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತಿಷ್ಠಿತ ಸ್ವಾತಂತ್ರ್ಯದ 100 ವರ್ಷಗಳತ್ತ ನಾವು ಒಟ್ಟಾಗಿ ಹೆಚ್ಚಿನ ಸಮೈಕಿಕ ದೇಶವಾಗಿ ಮುನ್ನಡೆಯೋಣ.

ಇತಿಹಾಸ ಹಾಗೂ ಸಂಸ್ಕೃತಿ

ಸಮಜೋ-ಆರ್ಥಿಕ ಮತ್ತು ಸಾಂಸ್ಕೃತಿಕ ಚರಿತ್ರೆಯ ಬಗ್ಗೆ ಬೋಧಿಸುವುದು, ಚರಿತ್ರೆಯಲ್ಲಿನ ಮುಖ್ಯ ಘಟನೆಗಳ ಬಗ್ಗೆ ಜ್ಞಾನ, ಆನ್ವೇಷಣೆಗಳು ಮತ್ತು ಸಂಶೋಧನೆಗಳ ಬಗೆಗಿನ ಜ್ಞಾನ, ತಾಂತ್ರಿಕ ಮುನ್ನಡೆಗಳು, ಸಮುದಾಯವನ್ನು ಒಳಗೊಳ್ಳುವಿಕೆ, ಆಯುರ್ವೇದ, ಗಣಿತ, ಖಭೌತಶಾಸ್ತ್ರ ಇತ್ಯಾದಿ ಪ್ರಾಚೀನ ಜ್ಞಾನ ಶಿಸ್ತುಗಳ ಬಗೆಗಿನ ಅರಿವು.

  • ದೇಶದ ಗಡಿಹಳ್ಳಿಗಳು ಮತ್ತು ಸುದೂರ ಪ್ರದೇಶಗಳು: ಭಾರತದ ಹೊರವಲಯದಲ್ಲಿರುವ ಹಳ್ಳಿಗಳ ಅಭಿವೃದ್ಧಿ, ಸ್ಥಾನಿಕ ಕಲೆಗಳು ಮತ್ತು ಕಲಾವಿದರನ್ನು ಉತ್ತೇಜಿಸುವುದು. ಪ್ರಾಂತೀಯ ತಿಂಡಿತಿನಿಸುಗಳನ್ನು ಜನಪ್ರಿಯಗೊಳಿಸುವುದು, ಪ್ರಾಂತೀಯ ಭಾಷೆಗಳನ್ನು ಮುಖ್ಯವಾಹಿನಿಗೆ ತರುವುದು, ಗಡಿ ಪ್ರದೇಶ ಹಾಗೂ ಇನ್ನಿತರ ಸ್ಥಳಗಳಲ್ಲಿ ಪ್ರವಾಸ ಆಥಿಕತೆಯನ್ನು ಉತ್ತೇಜಿಸುವುದು.
  • ಒಂದು ಭಾರತ ಶ್ರೇಷ್ಠ ಭಾರತ: ಭಾಷೆಗಳು, ತಿಂಡಿತಿನಿಸುಗಳು, ವಸ್ತ್ರಗಳು, ಹಬ್ಬಗಳು, ಜನಪದ ನೃತ್ಯಗಳು, ಕ್ರೀಡೆ, ರಂಗಕ್ಷೇತ್ರ, ಚಲನಚಿತ್ರ, ಪ್ರವಾಸ ವಿನಿಮಯ, ಸುಸ್ಥಿರ ಸಾಂಸ್ಕೃತಿಕ ಸಂಬಂಧಗಳ ವರ್ಧನೆ, ಸಮೃದ್ಧವಾದ ಸಾಂಸ್ಕೃತುಕ ಪರಂಪರೆಯ ಪ್ರದರ್ಶನ, ಭ್ರಾತೃತ್ವ ಮತ್ತು ಒಗ್ಗಟ್ಟನ್ನು ಉತ್ತೇಜಿಸುವುದು.
  • ಸ್ವಾತಂತ್ರ ಹೋರಾಟಗಾರರು ಮತ್ತು ಹಾಡಿಹೊಗಳದ ನಾಯಕರು: ಅಷ್ಟು ಗೊತ್ತಿರದ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಗೌರವಿಸುವುದು, ದೇಶದ ಯುವಕರಿಗೆ ಸ್ಫೂರ್ತಿ ನೀಡುವುದು, ಆದಿವಾಸಿ ನಾಯಕರು ಹಾಗೂ ಆಂದೋಲನಗಳ ಬಗೆಗಿನ ಅರಿವು, ಧೈರ್ಯಶಾಲಿ ವ್ಯಕ್ತಿಗಳ ಮೌಲ್ಯಗಳು ಮತ್ತು ನೈತಿಕತೆಗಳನ್ನು ನೆನಪಿಸಿಕೊಳ್ಳುವುದು.
  • ಆದಿವಾಸಿ ಸಮುದಾಯಗಳು: ಆದಿವಾಸಿ ಕರಕುಶಲ ವಸ್ತುಗಳು, ವರ್ಣಚಿತ್ರಗಳು, ಬಟ್ಟೆಬರೆಗಳು, ಪಾತ್ರೆ ಪಗಡಿಗಳು, ಸಾವಯವ ಮತ್ತು ನೈಸರ್ಗಿಕ ಆದಿವಾಸಿ ಆಹಾರ ಉತ್ಪನ್ನಗಳು, ಆದಿವಾಸಿ ಆರ್ಥಿಕತೆಯ ಬಗೆಗಿನ ಅರಿವು, ಆಧುನಿಕ ತಾಂತ್ರಿಕತೆಗೆ ಪರಿಚಯ, ಆದಿವಾಸಿ ಜೀವನಶೈಲಿಯ ಸಮಾಜೋ-ಸಾಂಸ್ಕೃತಿಕ ಆಯಾಮಗಳ ಬಗ್ಗೆ ಅರಿವು, ಅವರ ಕೌಶಲ್ಯ ಮತ್ತು ಕರಕುಶಲ ವಸ್ತುಗಳು, ಈ ಸಮುದಾಯಗಳ ಕೌಶಲ್ಯವರ್ಧನೆ ಇತ್ಯಾದಿ.
  • ಗ್ರಾಮೀಣ ಕಲಾಕಾರರು: ಸ್ಥಾನಿಕ ಕಲಾಪ್ರಕಾರಗಳು ಮತ್ತು ಕಲಾಕಾರರ ಪ್ರದರ್ಶನ ಮತ್ತು ಸಂರಕ್ಷಿಸುವಿಕೆ, ಈ ಕಲಾ ಪ್ರಕಾರಗಳ ಕೇಂದ್ರಿತ ಶಿಕ್ಷಣವನ್ನು ಬೋಧಿಸುವುದು, ಅಪಾಯಂಚಿನಲ್ಲಿರುವ ಕಲಾಪ್ರಕಾರಗಳನ್ನು ಪ್ರೋತ್ಸಾಹಿಸುವುದು.
  • ಕ್ರೀಡೆಗಳು: ಸ್ಥಾನಿಕ ಹಾಗೂ ಪ್ರಾಂತೀಯ ಕ್ರೀಡೆಗಳನ್ನು ಪ್ರೋತ್ಸಾಹಿಸುವುದು, ಕ್ರೀಡೆಗಳಲ್ಲಿನ ಕೆಲಸದ ಹುದ್ದೆಗಳ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುವುದು, ಕ್ರೀಡೆಗಳಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವುದು, ಅರಳುವ ಪ್ರತಿಭೆಗಳಿಗೆ ಅವಕಾಶಗಳು, ಕಬಡ್ಡಿ ಇತ್ಯಾದಿ ಹಳೆಯ ಆಟಗಳ ಸಂರಕ್ಷಣೆ.
  • ಸಿನೆಮಾ ಮತ್ತು ಸಂಗೀತ: ಪ್ರಾಂತೀಯ ಗೀತೆಗಳು ಹಾಗೂ ಕಲೆಗಳನ್ನು ವರ್ಧಿಸುವುದು, ಪ್ರಾಂತೀಯ ಭಾಷೆಗಳನ್ನು ಜನಪ್ರಿಯಗೊಳಿಸುವುದು, ಸ್ಥಳೀಯ ಕಲಾವಿದರನ್ನು ಮೇಲೆತ್ತುವುದು, ರಂಗಕ್ಷೇತ್ರವನ್ನು ಪುನರ್‌ ರೂಪಿಸುವುದು ಇತ್ಯಾದಿ.
  • ಯುವಜನ ಮತ್ತು ದೇಶ ಕಟ್ಟುವಿಕೆ: ಯುವಜನರ ಧ್ವನಿಗೆ ವೇದಿಕೆ ಒದಗಿಸುವುದು, ರಾಷ್ಟ್ರೀಯ ಜವಾಬ್ದಾರಿಯ ಬಗ್ಗೆ ಅರಿವು, ವಾಕ್‌ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಬಗೆಗಿನ ಅರಿವು, ಸ್ವಯಂ ಪ್ರೇರಣೆಗಾಗಿನ ಅರಿವು, ಯುವ ಕೇಂದ್ರಿತ ವಿಷಯಗಳು (ಸುಸ್ಥಿರತೆ, ಮಾನಸಿಕ ಸ್ವಾಸ್ಥ್ಯದ ಬಗೆಗಿನ ಅರಿವು, ಸಂತಾನೋತ್ಪತ್ತಿ ಆರೋಗ್ಯ, ನೀರಿನ ಸಂರಕ್ಷಣೆ ಇತ್ಯಾದಿ; ರಾಷ್ಟ್ರೀಯ ಪ್ರಜ್ಞೆ ಮೂಡಿಸುವುದು, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು, ಉದ್ಯೋಗ ಸಮಾಲೋವನೆ, ಉದ್ದಿಮೆ ಹಾಗೂ ಯುವಕರಿಂದ ಆರಂಭಿಸಲ್ಪಟ್ಟ ಘಟಕಗಳು, ಆಧ್ಯಾತ್ಮಿಕತೆ, ಗ್ರಹದ ಬಗೆಗಿನ ಪ್ರಜ್ಞೆ, ಡಿಜಿಟಲ್‌ ವಿದ್ಯೆ, ಆರ್ಥಿಕತೆಯ ತಿಳಿವು ಇತ್ಯಾದಿ
  • ಗೃಹಮಟ್ಟಕ್ಕೆ ತುಲುಪುವುದು-ದೈನಂದಿಕ ಚಟುವಟಿಕೆಗಳ ಸುತ್ತ ಆಂದೋಲನಗಳು: ಉದಾಹರಣೆಗೆ: ಚಾಯ್‌ ಪೆ ಚರ್ಚಾ.
  • 15ನೇ ಆಗಸ್ಟ್‌ 2022ರಂದು 76ನೇ ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರು ಹೇಳಿದ ಪಂಚಪ್ರಾಣಗಳ ವಿಸ್ತರಣೆ:
  • ಅಭಿವೃದ್ಧಿ ಹೊಂದಿದ ಭಾರತದ ಗುರಿ: ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ದೊಡ್ಡ ನಿರ್ಣಯದೊಂದಿಗೆ ಮುನ್ನಡೆಯುವಿಕೆ ಯಾವುದೇ ಕೊರತೆಯನ್ನು ಒಪ್ಪದಿರುವುದು.
  • ವಸಾಹಿತಿ ಮನೋಭಾವದ ಉಳಿಕೆಯಿದ್ದಲ್ಲಿ ಅದನ್ನು ತೆಗೆದುಹಾಕುವುದು: ಆಳ ಮನಸ್ಸಿನಲ್ಲಾಗಲೀ ಅಥವಾ ಅಭ್ಯಾಸಗಳಲ್ಲಾಗಲೀ, ನಮ್ಮ ಅಸ್ತಿತ್ವದ ಯಾವುದೇ ಅಂಶದಲ್ಲಾಗಲೀ ಹತ್ತಿಕ್ಕುವಿಕೆಯ ಯಾವುದೇ ಎಳೆಯಿದ್ದಲ್ಲಿ.
  • ನಮ್ಮ ಬೇರುಗಳ ಬಗ್ಗೆ ಹೆಮ್ಮೆ ಪಡುವುದು: ನಮ್ಮ ಪರಂಪರೆ ಹಾಗೂ ಶ್ರೇಷ್ಠತೆಯ ಬಗ್ಗೆ ನಾವು ಹೆಮ್ಮೆ ಪಡಬೇಕು ಏಕೆಂದರೆ ಇದೇ ಪರಂಪರೆಯು ಹಿಂದೆ ಭಾರತಕ್ಕೆ ಸುವರ್ಣಕಾಲವನ್ನು ನೀಡಿತ್ತು ಮತ್ತು ಇದೇ ಪರಂಒರೆಯ ಆಧಾರದ ಮೇಲೆ ಹೆಚ್ಚಿನದಾಗಿ ಮುಂದುವರಿದ ದೇಶವನ್ನು ಕಟ್ಟಬಹುದಾಗಿದೆ.
  • ಒಗ್ಗಟ್ಟು: ನಮ್ಮ ಪ್ರಯತ್ನಗಳಲ್ಲಿ ಒಗ್ಗಟ್ಟನ್ನು ಖಚಿತಪಡಿಸುವುದು.
  • ನಾಗರೀಕರಲ್ಲಿ ಕರ್ತವ್ಯ ಪ್ರಜ್ಞೆ: ರಾಷ್ಟ್ರದ ಬಗ್ಗೆ ಜವಾಬ್ದಾರಿಯ ಭಾವ ಮತ್ತು ಅದರ ಮುನ್ನಡೆಗೆ ಕೊಡುಗೆ ನೀಡಲು ಶ್ರಮಿಸುವುದು.
  • ಇನ್ನಿತರ ಕ್ಷೇತ್ರಗಳು: ಮಾತುಕತೆ ಮತ್ತು ಒಗ್ಗಟ್ಟನ್ನು ಹೆಚ್ಚಿಸಲು ಬೇಕಾದ ಸಂಬಂಧಿತ ವಿಚಾರಗಳು.
read more

Top