ಆರೋಗ್ಯ ಮತ್ತು ಸುಖೀಭಾವ | ಶೀರ್ಷಿಕೆಗಳು 2.0 | ಆಜಾದಿ ಕ ಅಮೃತ್ ಮಹೋತ್ಸವ, ಭಾರತ ಸರ್ಕಾರ.

ಆರೋಗ್ಯ ಮತ್ತು ಸುಖೀಭಾವ

Health and Wellness

ಆರೋಗ್ಯ ಮತ್ತು ಸುಖೀಭಾವ

ಆಸ್ಪತ್ರೆಗಳು, ವೈದ್ಯಕೀಯ ಸಾಧನಗಳು, ಚಿಕಿತ್ಸಾ ವಿಧಾನಗಳು, ಹೊರಗುತ್ತಿಗೆ, ದೂರ ತಪಾಸಣೆ, ವೈದ್ಯಕೀಯ ಪ್ರವಾಸೋದ್ಯಮ, ಆರೋಗ್ಯ ವಿಮೆ ಮತ್ತು ವೈದ್ಯಕೀಯ ಉಪಕರಣಗಳು ಆರೋಗ್ಯ ಕಾಳಜಿ ವಲಯದ ಭಾಗಗಳಾಗಿವೆ. ರೋಗ ಶುಶ್ರೂಷಾ ಪ್ರಕ್ರಿಯೆ ಮತ್ತು ತಡೆಗಟ್ಟುವ ಕ್ರಮದ ಮಸೂರದೊಳಗಿನಿಂದ ಆರೋಗ್ಯವನ್ನು ಅರ್ಥೈಸಿಕೊಳ್ಳಬಹುದು. ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸೆಗಳಂತಹ ಪ್ರಾಚೀನ ಔಷಧಿ ಶಿಸ್ತುಗಳಲ್ಲಿ ಅಡಗಿರುವ ಪ್ರಕಾಂಡ ಜ್ಞಾನದ ಆಧಾರದ ಮೇಲಿನ ಆರೋಗ್ಯದ ಬಗ್ಗೆ ಐತಿಹಾಸಿಕ ಪಾರಂಪರಿಕ ಮಾರ್ಗಗಳು. ಭಾರತದಲ್ಲಿ ಆರೋಗು ಮತ್ತು, ಸುಖೀಭಾವದ ಬಹುಮುಖ್ಯ ಭಾಗಗಳಾಗಿ ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಪದ್ಧತಿಗಳಿವೆ.

ಆರೋಗ್ಯ ಕಾಳಜಿಯ ಕ್ಷೇತ್ರಗಳು

  • ಆಯುಷ್‌: ಭಾರತೀಯ ಜ್ಞಾನ ಶಿಸ್ತುಗಳಲ್ಲಿ ಅಡಗಿರುವ ಪಾರಂಪರಿಕ ಔಷಧಿಗಳ ಜ್ಞಾನದ ಪುನರೋತ್ಥಾನದ ಮೇಲೆ ಗಮನ ಹರಿಸುವುದು. ಆಯುಷ್‌ ಕ್ಷೇತ್ರವು ಗಮನಾಹ ಬೆಳವಣಿಗೆಯನ್ನು ಕಂಡಿಗೆ.
  • ಯೋಗದಿಂದ ಸುಖೀಭಾವ ಮತ್ತು ಆರೋಗ್ಯ ಕ್ಷಮತೆ: ಯೋಗ ಕೇಂದ್ರಿತ ಸಂಪೂಣ ಸುಖೀಭಾವದ ಬಗ್ಗೆ ಪ್ರಪಂಚವು ಯಾವಾಗಲೂ ಭಾರತದತ್ತ ನೋಡುತ್ತಾ ಬಂದಿದೆ. ದೈನಂದಿನ ಸ್ಥಿರ ಜೀವನಶೈಲಿ ಆಧಾರಿತ ಬದುಕು ಹೆಚ್ಚುತ್ತಿರುವ ಈ ದಿನಗಳಲ್ಲಿ ಮುಂದಿನ ಗುರಿ, ಪ್ರತಿಯೊಬ್ಬನ ಜೀವನದ ಅನಿವಾಯ ಅಂಗವಾಗಿ ಯೋಗವನ್ನು ಅಳವಡಿಸಿಕೊಳ್ಳುವುದಾಗಿದೆ.
  • ಉತ್ತಮ ಆರೋಗ್ಯಕ್ಕಾಗಿ ಆಯುರ್ವೇದ: ಆಯುರ್ವೇದದ ಪಾತ್ರ ಮತ್ತು ಕಾರ್ಯವನ್ನು ಹೊರಹೊಮ್ಮಿಸುವಲ್ಲಿ ರೂಪಿಸಿರುವ ಯೋಜನೆಗಳು, ಪಂಚಭೂತದ ಬಗೆಗಿನ ನಿರೂಪಣೆಗಳು ಇತ್ಯಾದಿ.
  • ಮಾನಸಿಕ ಸ್ವಾಸ್ಥ್ಯ ಮತ್ತು ಒತ್ತಡ ನಿರ್ವಹಣೆ: ಅರಿವಿನ ಶಿಬಿರಗಳು, ಸಾಂಸ್ಥಿಕ ಉಓಜನೆಗಳು, ಔಷಧಿ ಸೇವನೆ ಮತ್ತು ಯೋಗ ಆಧಾರಿತ ಆರಂಭಿಕೆಗಳು, ಪರೀಕ್ಷಾ ಒತ್ತಡದ ಮೇಲೆ ವಿಶೇಷ ಗಮನ, ಸುದೀರ್ಘ ಕರ್ತವ್ಯ ಅವಧಿಯ ಪೊಲೀಸ್‌ ಮತ್ತಿತರ ವೃತ್ತಿಗಳು ಇತ್ಯಾದಿ.
  • ಆರೋಗ್ಯವಂತ ಭಾರತದ ಕಡೆಗೆ: ನಿರ್ದಿಷ್ಠ ವಲಯಗಳನ್ನು ಗುರಿಯಾಗಿಸಿದ ಫಲಿಸುವ ಕಾರ್ಯಯೋಜನೆಗಳು-ಮಹಿಳೆ, ಮಕ್ಕಳು, ಹಿರಿಯ ನಾಗರೀಕರು, ನಗರದ ವೃತ್ತಿನಿರತ ಪುರುಷರು ಇತ್ಯಾದಿ.
  • ಹೆರಿಗೆ ಸಂಬಂಧಿತ ಆರೋಗ್ಯ ಮತ್ತು ಶಿಶು ಆರೋಗ್ಯ: ನವನವೀನ ವಿನೂತನ ಅಭ್ಯಾಸಗಳ ಮೇಲೆ ಗಮನಹರಿಸುವ ವಿಶೇಷ ಶಿಬಿರಗಳು ಮತ್ತು ಸಮ್ಮೇಳನಗಳು.
  • ಪೌಷ್ಠಿಕತೆ ಮತ್ತು ಶಿಕ್ಷಣ: ಮಧ್ಯಾಹ್ನದ ಊಟದ ಮೇಲೆ ಗಮನ-ಸತ್ವವರ್ಧನೆ, ಪೋಷಣೆ ವಾಟಿಕೆಗಳು, ಪಥ ಚಾಲಕ ಅಂಶಗಳು ಇತ್ಯಾದಿ.
  • ಆರೋಗ್ಯ ರಕ್ಷಣೆ ಮತ್ತು ನೈರ್ಮಲ್ಯ: ಆರೋಗ್ಯ ರಕ್ಷಣೆ ಸೇವೆಗಳ ಹೆಚ್ಚಳ, ವ್ಯಕ್ತಿಗತ ನೈರ್ಮಲ್ಯದ ಬಗೆಗಿನ ಅರಿವು, ಪ್ರಥಮ ಚಿಕಿತ್ಸೆಯ ಮೂಲಜ್ಞಾನ, ಮುಟ್ಟಿನ ಆರೋಗ್ಯ ರಕ್ಷಣೆ, ಸಂತಾನೋತ್ಪತಿ ಆರೋಗ್ಯ, ಚುಚ್ಚುಮದ್ದು, ಆರೋಗ್ಯಕರ ಜೀವನ ಶೈಲಿಯ ಬಗ್ಗೆ ಅರಿವು.
  • ಆರೋಗ್ಯ ರಕ್ಷಣೆಯಲ್ಲಿ ಆರಂಭಿಕೆಗಳು: ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ಸಂಬಂಧಿತ ಪರಿಣಾಮಕಾರಿ ಅಂಶಗಳನ್ನು ತೊಡಗಿಸುವ ಕಾರ್ಯಯೋಜನೆಗಳ ಆರಂಭಿಕೆಗಳು.
  • ಆಟ ಮತ್ತು ಕ್ರೀಡೆಯ ಸಮಯ: ಉತ್ತಮ ಆರೋಗು ಪಡೆಯುವುದಕ್ಕಾಗಿ ಪ್ರತಿದಿನ ಆಟೋಟಗಳ ಸಮಯದ ಕಾರ್ಯಯೋಜನೆಗಳು.
  • ವೈದ್ಯಕೀಯ ಪ್ರವಾಸೋದ್ಯಮ: ವೈದ್ಯಕೀಯ ಪ್ರವಾಸೋದ್ಯಮದ ಬಗ್ಗೆ ಹೆಚ್ಚುತ್ತಿರುವ ರೀತಿಯ ಬಗ್ಗೆ ಗಮನಹರಿಸುವ ಸಮ್ಮೇಳನಗಳು ಮತ್ತು ಗೋಷ್ಠಿಗಳು-ರೀತಿಗಳು, ಅವಕಾಶಗಳು ಮತ್ತು ಸವಾಲುಗಳು. ಆರೋಗು ರಕ್ಷಣೆಯಲ್ಲಿ ಖರ್ಚಿನ ನಿರ್ವಹಣೆ, ಭಾರತೀಯ ನಾವೀನ್ಯತೆ ಮೇಲೆ ಬೆಳಕು ಚೆಲ್ಲುವುದು ಮತ್ತು ಹೊರ ನಡೆಗಾಗಿ ವಿಶೇಷ ಪ್ರಚಾರಗಳು.
  • ಬಾಲ್ಯದ ಅಧಿಕ ತೂಕ: ಜಂಕ್‌ ಆಹಾರ ಸೇವನೆ, ಸರಿಯಾದ ಆಹಾರ ಸೇವನೆಯ ಬಗ್ಗೆ ಅರಿವು ಮೂಡಿಸುವ ನಗರದಲ್ಲಿನ ಪ್ರಚಾರಗಳು.
  • ಚುಚ್ಚುಮದ್ದು ಯೋಜನೆಗಳು: ದೊಡ್ಡ ಮಟ್ಟದ ಚುಚ್ಚು ಮದ್ದು ಯೋಜನೆಗಳು, ಉತ್ತಮ ಅಭ್ಯಾಸಗಳು, ಕೋವಿಡ್‌ ಅನುಭದ ಪಾಠಗಳು, ಬೇರೆ ದೇಶಗಳೊಂದಿಗೆ ಜ್ಞಾನ ಹಂಚಿಕೊಳ್ಳುವಿಕೆ
  • ನವಭಾರತ-ಪ್ರಪಂಚದ ಔಷಧಾಲಯ: ಗಾತ್ರದಲ್ಲಿ ಭಾರತವು ಪ್ರಪಂಚದ ಮೂರನೇ ಅತೊ ದೊಡ್ಡ ಔಷಧಿ ಉದ್ಯೋಗವಾಗಿದೆ. ತಮ್ಮ ಉತ್ತಮ ಗುಣಮಟ್ಟ ಮತ್ತು ಸ್ಪರ್ಧಾತ್ಮಕ ಬೆಲೆಗಳ ನೆರವಿನಿಂದ ಭಾರತದ ಔಷಧಿ ಕಂಪೆನಿಗಳು ಜಾಗತಿಕ ಪ್ರಭಾವವನ್ನು ಹೊಂದಿವೆ. ಭಾರತದಿಂದ ಜಗತ್ತಿನ ಚುಚ್ಚುಮದ್ದುಗಳ 60^ ಭಾಗ ಮತ್ತು ಜೆನೆರಿಕ್‌ ಔಷಧಿಗಳ 20% ಭಾಗ ಹೊರಹೊಮ್ಮುತ್ತಿದೆ.
  • ಆರೋಗ್ಯ ತಂತ್ರಜ್ಞಾನ ಮತ್ತು ಟೆಲಿಮೆಡಿಸಿನ್
read more

Top