ಮಹಿಳೆ ಮತ್ತು ಮಕ್ಕಳು | ಶೀರ್ಷಿಕೆಗಳು 2.0 | ಆಜಾದಿ ಕ ಅಮೃತ್ ಮಹೋತ್ಸವ, ಭಾರತ ಸರ್ಕಾರ.

ಮಹಿಳೆ ಮತ್ತು ಮಕ್ಕಳು

Women and Children

ಮಹಿಳೆ ಮತ್ತು ಮಕ್ಕಳು

ಯಾವುದೇ ದೇಶಕ್ಕಾಗಲೀ ಮಕ್ಕಳ ಅಭಿವೃದ್ಧಿಗಾಗಿ ಬಂಡವಾಳ ಹೂಡುವುದು ಆ ರಾಷ್ಟ್ರದ ಭವಿಷ್ಯದ ಒಳಿತಿಗಾಗಿ ಮಾಡುವ ಬಹುಮುಖ್ಯ ಕೆಲಸ. ಮಕ್ಕಳಿಗೆ ನೀಡುವ ಶಿಕ್ಷಣ, ಮೌಲ್ಯಗಳು ಮತ್ತು ಆರೋಗ್ಯವು ನೇರವಾಗಿ ದೇಶಗಳ ಸಾಮಾಜಿಕ ಹಾಗೂ ಆರ್ಥಿಕ ಸೂಚಕಗಳಾಗುತ್ತವೆ ಮತ್ತು ಅವುಗಳ ಜಾಗತಿಕ ನೆಲೆಯುನ್ನು ರೂಪಿಸುತ್ತವೆ. ಹಾಗಾಗಿ, ಮಕ್ಕಳಿಗೆ ನಾಗರೀಕ, ಸಾಮಾಜಿಕ ಮತ್ತು ನೈತಿಕಲ ಶಿಕ್ಷಣ ದೊರಕುವುದು ಅತ್ಯಂತ ಮುಖ್ಯ ಸಂಗತಿಯಾಗುತ್ತದೆ. ಹಾಗೆಯೇ ಆರೋಗ್ಯ ರಕ್ಷಣಾ ಸೇವೆಗಳು ಮತ್ತು ಇತ್ತೀಚಿನ ಹಲವಾರು ಕ್ಷೇತ್ರಗಳ (ವೈಜ್ಞಾನಿಕ, ತಾಂತ್ರಿಕ, ಸಾಂಸ್ಕೃತಿಕ, ಕಲಾ, ಶೈಕ್ಷಣಿಕ ಇತ್ಯಾದಿ) ಬೆಳವಣಿಗೆಗಳ ಪರಿಚಯ ಮಾಡಿಕೊಡುವುದೂ ಸಹ ಮುಖ್ಯವಾಗುತ್ತದೆ. ಭಾರತದಲ್ಲಿ ಮಕ್ಕಳ ರಕ್ಷಣೆಯ ವಿಷಯದಲ್ಲಿ ಸಾಕಷ್ಟು ಉತ್ತಮ ಬೆಳವಣಿಗೆಯಾಗಿದ್ದರೂ ಸಹ ಆರೋಗ್ಯ ಸೇವೆಗಳು, ನೈರ್ಮಲ್ಯ, ಶಿಕ್ಷಣ ಇತ್ಯಾದಿಗಳಲ್ಲಿ ವಿಶೇಷವಾಗಿ ಗ್ರಾಮೀಣ ಮತ್ತು ಆದಿವಾಸಿ ಸಮುದಾಯಗಳ ಮಕ್ಕಳಿಗಾಗಿ ಇನ್ನೂ ಸಾಕಷ್ಟು ಕೆಲಸ ಮಾಡಬೇಕಾಗಿದೆ.

ಯಾವುದೇ ದೇಶದ ಅಭಿವೃದ್ಧಿ ಮತ್ತು ಪ್ರಗತಿಯನ್ನು ಅಳೆಯಲು ಕುಟುಂಬದ ಒಳಗಿನ ಹಾಗೂ ಹೊರಗಿರುವ ಮಹಿಳೆಯು ಬಲು ಮುಖ್ಯ ಘಟಕವಾಗುತ್ತಾಳೆ. ಭಾರತದ ಸಂದರ್ಭದಲ್ಲಿ ಮಹಿಳಾ ಆಂದೋಲನವು ಶಿಕ್ಷಣ ಮತ್ತು ಹೆಣ್ಣು ಮಕ್ಕಳ ಆರೋಗ್ಯದಂತಹ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಕಂಡು, ಬಹುದೂರ ಸಾಗಿ ಬಂದಿದೆ. ಈ ವಿಷಯದ ಎಲ್ಲಾ ಕ್ಷೇತ್ರಗಳಲ್ಲಿನ ವಿಶೇಷ ಪ್ರಯತ್ನಗಳಿಂದಾಗಿ ಈ ಪ್ರಗತಿಯು ಕಷ್ಟಪಟ್ಟು ಸಾಧಿಸಿದ್ದಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ, ಸರ್ಕಾರೇತರ ಸೇವಾ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳ ಯೋಜನೆಗಳಿಂದಾಗಿ ಇದು ಸಾಧ್ಯವಾಗಿದೆ. ಎಲ್ಲಕ್ಕಿಂತ ಹೆಚ್ಚು ಮುಖ್ಯವಾಗುವುದೇನೆಂದರೆ ಕೆಲ ಮಹಿಳೆಯರು ವ್ಯಕ್ತಿಗತವಾಗಿ ಧೈರ್ಯ ಹಾಗೂ ಸತತ ಪ್ರಯತ್ನಗಳಿಂದಾಗಿ ಭಾರತದ ವಿನ್ಯಾಸವನ್ನೇ ಬದಲಾಯಿಸಿದ್ದಾರೆ.

ಮಕ್ಕಳ ಅಭಿವೃದ್ಧಿ

ಭಾರತದಲ್ಲಿ ಮಕ್ಕಳ ಅಭಿವೃದ್ಧಿಯನ್ನು ಉತ್ತಮಗೊಳಿಸಲು ಗಮನಿಸಬೇಕಾದ ಕ್ಷೇತ್ರಗಳು

ಪೌಷ್ಠಿಕತೆ, ಆರೋಗು ಮತ್ತು ನೈರ್ಮಲ್ಯ

  • ಅಂಚಿನ ಪ್ರದೇಶಗಳಲ್ಲಿರುವ ಮಕ್ಕಳ ಅಪೌಷ್ಠಿಕತೆಯ ಅರಿವು, ಶಾಲೆಗಳಲ್ಲಿ ಮಧ್ಯಾಹ್ನದ ಊಟ ತಾಯಿಯ ಆರೋಗ್ಯ ಮತ್ತು ಸಂತಾನೋತ್ಪತ್ತಿಯ ಅರಿವು, ತಾಯಂದಿರಿಗೆ ಮನೆಯಲ್ಲಿ ಸಮಾಲೋಚನೆ, ಮುಟ್ಟಿನ ಸಂಬಂಧಿತ ಆರೋಗ್ಯ ಉತ್ಪನ್ನಗಳಿಗೆ ನಿಲುಕು, ಗ್ರಾಮೀಣ ಶಾಲೆಗಳಲ್ಲಿ ನೈರ್ಮಲ್ಯದ ಕಿಟ್‌ಗಳು, ಇತ್ಯಾದಿ.
  • ತಾಯಿಯ ಆರೋಗ್ಯ ಮತ್ತು ಸಂತಾನೋತ್ಪತ್ತಿ ಆರೈಕೆಯ ಅರಿವು; ತಾಯಂದಿರಿಗೆ ಮನೆ ಸಮಾಲೋಚನೆ; ಮುಟ್ಟಿನ ಆರೋಗ್ಯ ರಕ್ಷಣೆ ಉತ್ಪನ್ನಗಳಿಗೆ ಪ್ರವೇಶ; ಗ್ರಾಮೀಣ ಶಾಲೆಗಳಲ್ಲಿ ನೈರ್ಮಲ್ಯ ಕಿಟ್‌ಗಳು ಇತ್ಯಾದಿ.
  • ಅಂಟು ಮತ್ತಿತರ ರೋಗಗಳಾದ ಕ್ಷಯ, ಮಲೇರಿಯಾ, ನ್ಯೂಮೋನಿಯಾ ಮತ್ತು ಹೆಪಟೈಟಿಸ್‌ ಬಗ್ಗೆ ಅರಿವು. ಗ್ರಾಮೀಣ ಭಾಗಗಳಲ್ಲಿ ಚುಚ್ಚುಮದ್ದು (ರೋಗ ನಿರೋಧಕ)
  • ನೈರ್ಮಲ್ಯ ಮತ್ತು ಸ್ವಚ್ಛತೆಗಾಗಿ ಗಮನ ಹರಿಸುವುದು
  • ಪ್ರೌಢ ವಯಸ್ಸಿನ ಹದಿಹರೆಯದ ಮಕ್ಕಳ ಭಾವನಾತ್ಮಕ ಸ್ಥಿತಿಸ್ಥಾಪನೆ. ಮಾನಸಿನ ಸ್ವಾಸ್ಥಾಯದ ಅರಿವು, ಮಾನಸಿಕ ಆರೋಗ್ಯ ತಜ್ಞರ ನೆರವು ಪಡೆಯಬೇಕೆಂಬುದರ ಬಗೆಗಿನ ಮೌಢ್ಯವನ್ನು ನಿವಾರಿಸುವುದು.

ಶಿಕ್ಷಣ

ಮೂಲ ಶಿಕ್ಷಣಕ್ಕೆ ನಿಲುಕು, ಗ್ರಾಮೀಣ ಶಾಲೆಗಳಲ್ಲಿ ಗುಣ ಮಟ್ಟದ ಪಠ್ಯ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳು ಉಪಲಬ್ಧಿ, ಗ್ರಾಮೀಣ ಬಾಲಕಿಯರ ಮನೆಗೆಲಸ ಒತ್ತಡದ ಅರಿವು, ನಾಯಕತ್ವ ಗುಣಗಳು, ಶಾಲೆಗಳಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವುದು ವೃತ್ತಿ ಆಧಾರಿತ ಶಿಕ್ಷಣ, ಓದುವ ಹವ್ಯಾಸ ಮತ್ತು ಮೂಲ ಗಣಿತದ ಕೌಶಲ್ಯಗಳನ್ನು ಬೆಳೆಸುವುದು, ವೃತ್ತಿಗಾಗಿನ ಕೌಶಲ್ಯ ತರಭೇತಿ, ಇ-ಪುಸ್ತಕಗಳು ಮತ್ತು ಗಣಕಯಂತ್ರಗಳಂತಹ ಸುಧಾರಿತ ತಾಂತ್ರಿಕ ಸಾಧನಗಳ ಸರಬರಾಜುಗಳು ಇತ್ಯಾದಿ.

  • ಬಾಲ್ಯದ ಅರಿವು/ಅಭಿವೃದ್ಧಿ:ಜನನ ಪೂವ ಮತ್ತು ಶಾಲೆಗೆ ಹೋಗುವ ವಯಸ್ಸಿನವರೆಗಿನ ಪೌಷ್ಠಿಕ ಅಗತ್ಯಗಳ ಬಗೆಗಿನ ಅರಿವು, ಆಟದ ಮೂಲಕ ಪಾಠದ ಅರಿವು, ಪರೀಕ್ಷಾ ಒತ್ತಡದೊಂದಿಗೆ ವ್ಯವಹರಿಸುವುದು ಮತ್ತು ಸಿದ್ಧತೆ, ಮಕ್ಕಳ ಚಟುವಟಿಕೆ ಮತ್ತು ಸಮಯ ಸೂಚಿಯ ಬಗ್ಗೆ ಮಕ್ಕಳೊಂದಿಗೆ ಪ್ರತಿದಿನದ ಮಾತುಕತೆ, ಸ್ಪಂದನಾತ್ಮಕ ಸಂಪೂಣ ಚಟುವಟಿಕೆಗಳ್ಲಲಿ ಭಾಗವಹಿಸುವಿಕೆ ಇತ್ಯಾದಿ.
  • ಶಾಲೆಯಲ್ಲಿನ ಮೂಲ ಸೌಕಯಗಳು: ಬೆಂಚುಗಳು, ಶಾಲಾಬಸ್‌, ಬ್ರಾಡ್‌ಬ್ಯಾಂಡ್‌ ಸಂಪರ್ಕ, ಮಧ್ಯಾಹ್ನದ ಊಟ, ಗ್ರಂಥಾಲಯ, ಪ್ರಯೋಗಾಲಯಗಳು, ಆಟದ ಮೈದಾನ, ಸುಸ್ಥಿರ ಮೂಲಸೌಕರ್ಯ, ಹಸಿರು ಶಾಲೆಗಳ ನಿರ್ಮಾಣ ಇತ್ಯಾದಿ.
  • ಆನ್‌ಲೈನ್‌ ಕಲಿಕೆ: ಡಿಜಿಟಲ್‌ ಸಾಕ್ಷರತೆಯನ್ನು ಜನಪ್ರಿಯ ಮಾಡುವುದು, ಹೆಚ್ಚಿನ ವಿಷಯ ಆಯ್ಕೆಗಳನ್ನು ನೀಡುವುದು, ದೂರ ಶಿಕ್ಷಣ, ತಾಂತ್ರಿಕ ಕೌಶಲ್ಯಗಳನ್ನು ಉತ್ತಮಗೊಳಿಸಿಕೊಳ್ಳುವುದು, ಸಮಯ ನಿರ್ವಹಣೆಯನ್ನು ಉತ್ತೇಜಿಸುವುದು ಇತ್ಯಾದಿ.
  • ಶಿಕ್ಷಕರಿಗೆ ಶಿಕ್ಷಣ: ಗ್ರಾಮೀಣ ಪ್ರದೇಶಗಳ ಶಿಕ್ಷಕ ತರಭೇತಿಯ ಅರಿವು, 2ನೇ ಮತ್ತು 3ನೇ ಹಂತದ ನಗರಗಳು, ತಂತ್ರಜ್ಞಾನವನ್ನು ಬಳಸುವ ಅರಿವು, ವೃತ್ತಿಪರತೆಯ ಅಭಿವೃದ್ಧಿ ಇತ್ಯಾದಿ.
  • ಕ್ರೀಡೆಗಳು: ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಅರಿವು, ಕ್ರೀಡೆಗಳು, ಕ್ರೀಡಾ ಮೂಲಸೌಕರ್ಯಗಳಲ್ಲಿ ಉದ್ಯೋಗ ಅರಸಲುಯ ಮಕ್ಕಳಿಗೆ ಉತ್ತೇಜನ, ಅರಳುವ ಪ್ರತಿಭೆಗಳಿಗೆ ಬೆಂಬಲ, ದೈಹಿಕ ಶಿಕ್ಷಣ ಬೋಧಕರ ತರಭೇತಿ, ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಉತ್ತೇಜನ.
  • ಪಠ್ಯೇತರ ಚಟುವಟಿಕೆಗಳು: ಮಕ್ಕಳಲ್ಲಿ ಇತರ ಕೌಶಲ್ಯಗಳಾದ ಭಾಷಣ ಕಲೆ, ವಿಮಶಾತ್ಮಕ ಆಲೋಚನೆ, ಸಾಮಾಜಿಕ, ಸ್ಪರ್ಧಾತ್ಮಕ ಸಮಯ ನಿರ್ವಹಣೆ, ತಂಡಭಾವ, ಆರೋಗ್ಯಕರ ಸ್ಪರ್ಧೆ ಇತ್ಯಾದಿ.
  • ಡಿಜಿಟಲ್‌ ಬಿಡುವು: ಸಾಮಾಜಿಕ ಜಾಲತಾಣಗಳ ಮತ್ತು ಸ್ಕ್ರೀನ್‌ ಸಮಯದ ಅಧಿಕತೆಯ ಅರಿವು, ನಿದ್ರಾಲಯದ ಬಗೆಗಿನ ಅರಿವು ಇತ್ಯಾದಿ.
  • ಕೀಟಲೆ ಮಾಡುವುದನ್ನು ತಡೆಗಟ್ಟುವುದು: ಆರಂಭದ ಶಾಲಾ ವರ್ಷಗಳಲ್ಲಿ ಕೀಟಲೆಯ ಅರಿವು, ಕೀಟಲೆ ವಿಋೋಧಿ ಸಮಿತಿ ಎಚನೆ, ಮಕ್ಕಳ ಸಮಾಲೋಚನೆಗೆ ನಿಲುಕು, ಧನಾತ್ಮಕ ಶಾಲಾ/ಕಾಲೇಜು ಪರಿಸರವನ್ನು ಉತ್ತೇಜಿಸುವುದು, ಮಾನಸಿಕ ಆರೋಗುಯ ಸಮಸ್ಯೆಗಳು ಇತ್ಯಾದಿ.
  • ವೃತ್ತಿ ಮಾರ್ಗದರ್ಶನ: ವಿವಿಧ ಶಾಖೆಗಳ ಅರಿವು, ಪರಿಣಾಮಕಾರಿ ಉದ್ಯೋಗ ಅವಕಾಶಗಳನ್ನು ಗುರುತಿಸುವುದು, ಕೌಶಲ್ಯಾಧಾರಿತ ತರಬೇತಿ, ಉದ್ಯೋಗ ಸಂಪರ್ಕದ ಒಳನೋಟಗಳು, ವಿದ್ಯಾರ್ಥಿವೇತನಗಳ ಅರಿವು, ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳ ಶೋಧನೆ, ಮಾರ್ಗದರ್ಶಿತ ವೃತ್ತ ಮೌಲ್ಯಮಾಪನ, ವೃತ್ತ ಆಧಾರಿತ ತರಬೇತಿ ಇತ್ಯಾದಿ.
  • ವಾಕ್‌ಚಾತುರ್ಯ ಮತ್ತು ಭಾಷೆ: ಪ್ರಾದೇಶಿಕ ಭಾಷೆಗಳ ಕಲಿಯುವಿಕೆ, ಸಂವಹನ ಕೌಶಲ್ಯಗಳ ಅಭಿವೃದ್ಧಿ, ಆಟಿಸಂನ ಪತ್ತೆ ಹಚ್ಚುವಿಕೆ ಮತ್ತು ಅರಿವು, ಇಳಿಮುಖ ರೋಗ, ವಾರ್‌ ಸಮಸ್ಯೆಗಳು ಇತ್ಯಾದಿ.
  • ವಿಶೇಷ ಬುದ್ಧಿಯ ಮಕ್ಕಳು: ಬ್ರೈಲ್‌ ಪುಸ್ತಕಗಳಂತಹ ವಿಶೇಷ ಶಿಕ್ಷಣ ಸಾಧನಗಳ ಬಗ್ಗೆ ಅರಿವು, ಶಾಲೆಗಳಲ್ಲಿ ವಿಶೇಷ ಶೌಷಾಲಯ ಮತ್ತು ಇಳಿಜಾರುಗಳ ಉಪಲಬ್ಧಿ, ವೃತ್ತಿಪರ ತರಬೇತಿ ಮತ್ತು ಶಿಕ್ಷಣ.
  • ಅನ್ಯಮನಸ್ಕತೆಯನ್ನು ಕಡಿಮೆ ಮಾಡುವುದು: ನಗರ ಮತ್ತು ಗ್ರಾಮೀಣ ಮಕ್ಕಳ ನಡುವಿನ ಶೈಕ್ಷಣಿಕ, ಮೂಲಸೌಕರ್ಯ ಮತ್ತು ಸಾಮಾಜಿಕ ಅಂತರಗಳನ್ನು ಸಂಧಿಸುವುದು.
  • ಸುರಕ್ಷತೆ ಮತ್ತು ಆತ್ಮರಕ್ಷಣೆ: ಆತ್ಮ ರಕ್ಷಣೆಯ ಮೂಲಪಾಠಗಳು, ಹೆಣ್ಣು ಮಕ್ಕಳನ್ನು ಚುಡಾಯಿಸುವುದರ ಬಗ್ಗೆ ಚರ್ಚೆಗಳು, ಸಾರ್ವಜನಿಕ ಸಾರಿಗೆ ಮತ್ತು ಸ್ಥಳಗಳಲ್ಲಿನ ಸುರಕ್ಷಾ ಮುಂಜಾಗ್ರತೆಯ ಅರಿವು ಇತ್ಯಾದಿ.
  • ಮಾದಕ ದ್ರವ್ಯ ದುರ್ಬಳಕೆ: ಮಾದಕ ದ್ರವ್ಯ ಸೇವನೆಯ ಹಿಡಿತಕ್ಕೆ ಮಕ್ಕಳು ಬೀಳುವ ಮಾರ್ಗಗಳ ಬಗ್ಗೆ ಅರಿವು (ಸ್ನೇಹಿತರ ಒತ್ತಡ, ಕೆಟ್ಟ ವ್ಯಕ್ತಿಗಳು ಇತ್ಯಾದಿ), ವರ್ತನೆಯಲ್ಲಿ ಬದಲಾವಣೆ ಮತ್ತು ಮಾನಸಿಕ ಒತ್ತಡದಂತಹ ಸುಳಿವುಗಳ ಅರಿವು, ದುಷ್ಪರಿಣಾಮಗಳ ಬಗ್ಗೆ ಅರಿವು, ಕುಟುಂಬ ಮತ್ತು ಮಕ್ಕಳ ಚಿಕಿತ್ಸೆ ಇತ್ಯಾದಿ.
  • ಭಾರತದಲ್ಲಿನ ಮಕ್ಕಳ ರಕ್ಷಣಾ ಕಾನೂನುಗಳ ಬಗ್ಗೆ ಅರಿವು: ಜ್ಯೂವಿನೈಲ್‌ ಜಸ್ಟೀಸ್‌ (ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾನೂನು, 2000; ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ 2009; ಮಕ್ಕಳ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2016; ಬಾಲ್ಯ ವಿವಾಹ ನಿಷೇಧ ಕಾಯ್ದೆ 2006.
  • ಬಾಲಕಾರ್ಮಿಕ: ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯಿದೆ, 2016, ಮಕ್ಕಳ ದೈಹಿಕ ಮತ್ತು ಮಾನಸಿಕ ಶೋಷಣೆ, ಮಕ್ಕಳ ಕಳ್ಳಸಾಗಣೆ, ಅಪಾಯಕಾರಿ ಕೆಲಸದ ವಾತಾವರಣ ಮುಂತಾದ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ.
  • ಸಂಸ್ಕೃತಿ ಮತ್ತು ಜಾಗೃತಿ: ಭಾರತೀಯ ಮತ್ತು ವಿಶ್ವ ಇತಿಹಾಸವನ್ನು ವರ್ಧಿಸುವುದು, ಬುಡಕಟ್ಟು ಇತಿಹಾಸ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಜ್ಞಾನ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಪರಂಪರೆಯ ಅದ್ಭುತಗಳ ಪ್ರಚಾರ, ಹಬ್ಬಗಳನ್ನು ಆಚರಿಸುವುದು, ಭಾಷಾ ವೈವಿಧ್ಯತೆಯನ್ನು ಉತ್ತೇಜಿಸುವುದು, ಸಮುದಾಯಗಳ ನಡುವೆ ಸಮನ್ವಯತೆ ಮತ್ತು ಏಕೀಕರಣ ಇತ್ಯಾದಿ.
  • ಸಂಗೀತ: ಶ್ರೀಮಂತ ಸಂಗೀತ ಪರಂಪರೆಯ ಬಗ್ಗೆ ಅರಿವು, ಅಡ್ಡ-ಸಾಂಸ್ಕೃತಿಕ ವಿನಿಮಯ, ನಿರ್ಮಾಣ ಭಾಷೆಯ ಹೊಂದಾಣಿಕೆ ಇತ್ಯಾದಿ
  • ಉದ್ಯಮಶೀಲತೆ ಮತ್ತು ನಾವೀನ್ಯತೆ: ಚಿಕ್ಕ ವಯಸ್ಸಿನಿಂದಲೇ ಸ್ಟಾರ್ಟ್-ಅಪ್‌ಗಳಿಗೆ ಸಂಪನ್ಮೂಲಗಳ ಬಗ್ಗೆ ಅರಿವು, ಕೌಶಲ್ಯ ಅಭಿವೃದ್ಧಿ, ಇತ್ತೀಚಿನ ತಾಂತ್ರಿಕ ಆವಿಷ್ಕಾರಗಳು ಇತ್ಯಾದಿ.
  • ಮಕ್ಕಳು ರಾಷ್ಟ್ರ ನಿರ್ಮಾತೃಗಳಾಗಿ: ಯುವಕರ ಧ್ವನಿಗಾಗಿ ವೇದಿಕೆಗಳು, ರಾಷ್ಟ್ರೀಯ ಜವಾಬ್ದಾರಿಯ ಬಗ್ಗೆ ಅರಿವು, ಸ್ವಯಂಸೇವಕತೆಯ ಬಗ್ಗೆ ಅರಿವು ಇತ್ಯಾದಿ.
  • ಇತ್ತೀಚಿನ ಯುವ-ಚಾಲಿತ ವಿಷಯಗಳು: ಸುಸ್ಥಿರತೆ, ಹವಾಮಾನ ಬದಲಾವಣೆ, ಮಾನಸಿಕ ಆರೋಗ್ಯ ಜಾಗೃತಿ, ಲಿಂಗ ಸಮಾನತೆ, ಸಸ್ಯಾಹಾರಿ ಆಹಾರ, ರಾಷ್ಟ್ರ ನಿರ್ಮಾಣ, ನೀರಿನ ಸಂರಕ್ಷಣೆ, ಅಂತರ್ಗತ ಅಭಿವೃದ್ಧಿ, ಮಾದಕ ವ್ಯಸನ, ತಾಂತ್ರಿಕ ಆವಿಷ್ಕಾರಗಳು ಇತ್ಯಾದಿ.

ಮಹಿಳಾ ಸಬಲೀಕರಣ

ಭಾರತದಲ್ಲಿ ಮಹಿಳೆಯರ ಜೀವನ ಸ್ಥಿತಿಯನ್ನು ಸುಧಾರಿಸಲು ಗಮನಾರ್ಹ ಬದಲಾವಣೆಗಳು ಮತ್ತು ಬೆಳವಣಿಗೆಗಳ ಅಗತ್ಯವಿರುವ ಕ್ಷೇತ್ರಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ:

  • ತಾಯಿಯ ಆರೈಕೆ: ಸಮಯೋಚಿತ ತಪಾಸಣೆಗಳ ಬಗ್ಗೆ ಅರಿವು, ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದನ್ನು ಮೇಲ್ವಿಚಾರಣೆ ಮಾಡುವುದು, ಗರ್ಭಪಾತದ ಅಪಾಯವನ್ನು ಪ್ರಚೋದಿಸುತ್ತದೆ, ಗರ್ಭಧಾರಣೆಯ ಪೂರ್ವ ಮತ್ತು ನಂತರದ ಪೋಷಣೆ, ಗರ್ಭಾವಸ್ಥೆಯಲ್ಲಿ ತಂಬಾಕು ಮತ್ತು ಮದ್ಯ ಸೇವನೆಯ ಪ್ರತಿಕೂಲ ಪರಿಣಾಮ, ಹೆಣ್ಣು ಶಿಶು ಹತ್ಯೆ ಇತ್ಯಾದಿ.
  • ಮುಟ್ಟಿನ ಆರೈಕೆ: ಮುಟ್ಟಿನ ಆರೋಗ್ಯದ ಅರಿವು, ನೈರ್ಮಲ್ಯ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ವಿಧಾನಗಳು, ಮುಟ್ಟಿನ ನೈರ್ಮಲ್ಯಕ್ಕಾಗಿ ಬಳಸಬೇಕಾದ ವಸ್ತುಗಳು ಇತ್ಯಾದಿ.
  • ಜನನ ನಿಯಂತ್ರಣ ಮತ್ತು ಕುಟುಂಬ ಯೋಜನೆ: ಕುಟುಂಬ ಯೋಜನೆಯ ಪ್ರಾಮುಖ್ಯತೆ, ಯೋಜಿತವಲ್ಲದ ಗರ್ಭಧಾರಣೆಯನ್ನು ತಪ್ಪಿಸುವುದು ಹೇಗೆ, ಜನನ ನಿಯಂತ್ರಣ ವಿಧಾನಗಳು, ಹದಿಹರೆಯದ ಗರ್ಭಧಾರಣೆಯನ್ನು ತಡೆಗಟ್ಟುವುದು ಇತ್ಯಾದಿ.
  • ಮಕ್ಕಳ ಆರೈಕೆ: ವಿವಿಧ ವಯಸ್ಸಿನ ಶ್ರೇಣಿಗಳಲ್ಲಿ (01 ವರ್ಷ, 1-2 ವರ್ಷಗಳು, 5-10 ವರ್ಷಗಳು ಮತ್ತಿತರ) ಮಕ್ಕಳ ಪೌಷ್ಠಿಕತೆಯ ಅಗತ್ಯಗಳ ಅರಿವು), ರೋಗ ನಿರೋಧಕ ಚುಚ್ಚು ಮದ್ದುಗಳ ಸಮಯಬದ್ಧ ನಿರ್ವಹಣೆ, ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷಣ ಕೊಡುವುದು, ಸರ್ಕಾರದ ಸಹಾಯದ ಶಿಶು ಕೇಂದ್ರಗಳು ಇತ್ಯಾದಿ.
  • ಪೌಷ್ಠಿಕತೆ ಮತ್ತು ಆರೊಗ್ಯ: ರಕ್ತಹೀನತೆ, ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುವ ಪೌಷ್ಠಿಕತೆ ನ್ಯೂನತೆಯ ಅರಿವು, ಸ್ವತಃ ಹಾಗೂ ವಾಸಿಸುವ ಪ್ರದೇಶದ ನೈರ್ಮಲ್ಯ ಹಾಗೂ ಸ್ವಚ್ಛತೆ ಕಾಪಾಡುವ ಮಾರ್ಗಗಳು, ದೈಹಿಕ ಸೌಖ್ಯದ ಜೊತೆಗೆ ಮಾನಸಿಕ ಮತ್ತು ಭಾವನಾತ್ಮಕ ಆರೊಗ್ಯದ ಮಹತ್ವದ ಅರಿವು ಇತ್ಯಾದಿ.
  • ಶಿಕ್ಷಣ: 6 ರಿಂದ 14 ವಯಸ್ಸಿನಲ್ಲಿ ಕಾನೂನಾತ್ಮಕವಾಗಿ ಕಡ್ಡಾಯ ಮತ್ತು ಉಚಿತ ಶಿಕ್ಷಣದ ಹಕ್ಕುಗಳ ಬಗ್ಗೆ ಅರಿವು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು ಮತ್ತು ವಿದ್ಯಾರ್ಥಿವೇತನಗಳ ಸನ್ನೆಗಳು, ಬಾಲಕಿಯರಿಗಾಗಿ ಶಿಕ್ಷಣ ಮತ್ತು ಮಾರ್ಗದರ್ಶನ ಇತ್ಯಾದಿ.
  • ವೃತ್ತಿಯನ್ನು ರೂಪಿಸಿಕೊಳ್ಳುವುದು: ವೃತ್ತಿಗಳ ಆಯ್ಕೆಗಳು ಮತ್ತು ವೇತನ ಶ್ರೇಣಿಗಳ ಬಗೆಗಳ ಬಗ್ಗೆ ಅರಿವು, ವೃತ್ತಿ ಬೆಳವಣಿಗೆಗಾಗಿ ಮಾರ್ಗದರ್ಶನ, ವೃತ್ತಿ ಆಧಾರಿತ ಕೋರ್ಸ್‌ಗಳ ಅರಿವು, ವೃತ್ತಿ ಆಧಾರಿತ ಕೌಶಲ್ಯಗಳ ಅಭಿವೃದ್ಧಿ, ವಿದ್ಯಾರ್ಥಿ ವೇತನಗಳು, ಉದ್ಯೋಗಸ್ಥ ಮಹಿಳೆಯರಿಗಾಗಿ ಬೆಂಬಲ ಇತ್ಯಾದಿ.
  • ಲಿಂಗ ತಾರತಮ್ಯ: ಹೆಣ್ಣು ಭ್ರೂಣಹತ್ಯೆ ಮತ್ತು ಅಪ್ರಾಪ್ತ ಬಾಲ್ಯವಿವಾಹಗಳಂತಹ ಸಮಾಜೋ-ಸಾಂಸ್ಕೃತಿಕ ಸಮಸ್ಯೆಗಳ ಅರಿವು, ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನ ಅವಕಾಶಗಳು, ಕೆಲಸ ಮಾಡುವ ಸ್ಥಳದಲ್ಲಿನ ಅವಕಾಶಗಳು ಮತ್ತು ಪೂರ್ವಾಗ್ರಹಗಳು, ವೃತ್ತಿಯ ವಿವಿಧ ಹಂತಗಳಲ್ಲಿ ಮಹಿಳೆಯರಿಗೆ ಮಾರ್ಗದರ್ಶನ.
  • ಆತ್ಮರಕ್ಷಣೆ, ಸುರಕ್ಷತೆ: ಮೂಲರಕ್ಷಣಾ ಕೌಶಲ್ಯಗಳು, ಸಾಂಸಾರಿಕ ಹಿಂಸೆಯ ಬಗೆಗಿನ ಹಕ್ಕುಗಳು, ಸಾರ್ವಜನಿಕ ಸಾರಿಗೆ ಮತ್ತು ಸ್ಥಳಗಳಲ್ಲಿನ ಸುರಕ್ಷಾ ಮುಂಜಾಗ್ರತೆಗಳ ಬಗ್ಗೆ ಅರಿವು, ಲೈಂಗಿಕ ಹಿಂಸಾಚಾರ ತಡೆಗಟ್ಟುವಿಕೆ ಇತ್ಯಾದಿ.
  • ಮಹಿಳಾ ಉದ್ದಿಮೆದಾರಿಕೆ: ಆರಂಭಿಕೆಗಳಿಗೆ ಸಂಪನ್ಮೂಲಗಳು, ಹಣಕಾಸು ಆಯ್ಕೆಗಳ ಬಗೆಗೆ ಇರುವ ಮಾಹಿತಿ/ಕೋರ್ಸ್‌ಗಳಲ್ಲಿ ಕಲಿಯುವ ಅವಕಶಗಳು, ಮಾರಾಟದಲ್ಲಿ ಸಹಾಯ, ಸಂಪರ್ಕಜಾಲ, ಮಹಿಳಾ ಕೇಂದ್ರಿತ/ನೇತೃತ್ವದ ಸಂಸ್ಥೆಗಳು ಮತ್ತು ಬ್ರಾಂಡ್‌ಗಳ ಬಗ್ಗೆ ಅರಿವು ಇತ್ಯಾದಿ.
  • ಆರ್ಥಿಕ ಸ್ವಾತಂತ್ರ್ಯ: ಆರ್ಥಿಕ ಅರಿವು (ಉದಾ: ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಹೇಗೆ ಬಳಸುವುದು (ಖಾತೆ ತೆರೆದು, ಹಣ ಪಡೆಯುವುದು ಇತ್ಯಾದಿ), ವೃತ್ತಿ ಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು, ವಿವಿಧ ಆರ್ಥಿಕ ಬಂಡವಾಳ ಹೂಡಿಕೆಗಳ ಬಗ್ಗೆ ಜ್ಞಾನ, ಸಮಾನ ಕೆಲಸಕ್ಕೆ ಸಮಾನ ವೇತನದ ಮಹತ್ವ ಇತ್ಯಾದಿ.
  • ಭಾರತದಲ್ಲಿ ಬಾಲಕಿಯರು ಮತ್ತು ಮಹಿಳೆಯರಿಗಾಗಿರುವ ಕಾನೂನಾತ್ಮಕ ಹಕ್ಕುಗಳ ಬಗ್ಗೆ ಅರಿವು: ಶಿಕ್ಷಣಕ್ಕಾಗಿ ಹಕ್ಕು (ಭಾರತದ ಸಂವಿಧಾನ, 86ನೇ ತಿದ್ದುಪಡಿ 2002 ಮತ್ತು ಉಚಿತ ಶಿಕ್ಷಣ ಮತ್ತು ಕಡ್ಡಾಯ ಶಿಕ್ಷಣ ಹಕ್ಕು, 2009), ಕಾರ್ಮಿಕ ಹಕ್ಕುಗಳು (ಫ್ಯಾಕ್ಟರಿ ಹಕ್ಕು 1948, ಹೆರಿಗೆ ಸೌಲಭ್ಯಗಳು ಮತ್ತು ರಜೆ (ಮೆಟರ್ನಿಟಿ ಬೆನಿಫಿಟ್‌ ಆಕ್ಟ್‌ 1961), ಕೌಟುಂಬಿಕ ಹಿಂಸಾಚಾರ (ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕಾನೂನು 2005), ವರದಕ್ಷಿಣೆ ವಸೂಲಿ, ಕಾನೂನಾತ್ಮಕ ವಿವಾಹದ ಕನಿಷ್ಠ ವಯಸ್ಸು, ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ಅರಿವು (ಸುಕನ್ಯಾ ಸಮೃದ್ಧಿ ಯೋಜನೆ 2015, ಬೇಟಿ ಬಚಾವೋ, ಬೇಟಿ ಪಡಾವೋ 2015, ಅಂಗನವಾಡಿ ಇತ್ಯಾದಿ), ಕಾನೂನಾತ್ಮಕ ರಕ್ಷಣಾ ಸಂಪನ್ಮೂಲಗಳ ಬಗ್ಗೆ ಮಾಹಿತಿ.
  • ಕಲಾಕಾರರು: ಮಹಿಳಾ ಕಲಾಕಾರರ ಪ್ರದರ್ಶನ (ರಾಷ್ಟೀಯ, ರಾಜ್ಯ/ಕೇಂದ್ರಾಡಳಿತ, ಗ್ರಾಮೀಣ, ಆದಿವಾಸಿ ಕಲಾಕಾರರು), ಅವರ ಕೌಶಲ್ಯಗಳು/ನಿಪುಣತೆಗಳು.
  • ಇತರ ಕ್ಷೇತ್ರಗಳು: ಮಹಿಳಾ ಅಭಿವೃದ್ಧಿಯ ಇತರ ಸಂಬಂಧಿತ ಬೆಳವಣಿಗೆ ಮತ್ತು ಅವಕಶಗಳ ಕ್ಷೇತ್ರಗಳು.
read more

Top